ನವದೆಹಲಿ: ಸೋನಾಲಿ ಫೋಗಟ್ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಅನುಮೋದನೆ ನೀಡಿದೆ.
ಈ ಹಿಂದೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಸೋನಾಲಿ ಫೋಗಟ್ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಫೋಗಟ್ ಆಗಸ್ಟ್ ನಲ್ಲಿ ಗೋವಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಆಗಸ್ಟ್ 23 ರಂದು ಉತ್ತರ ಗೋವಾ ಜಿಲ್ಲೆಯ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಗೆ ತನ್ನ ಹೋಟೆಲ್ನಿಂದ ಆಕೆಯನ್ನು ಕರೆತರಲಾಯಿತು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ವೈದ್ಯರು ಹೇಳಿದ್ದರು. ಆದಾಗ್ಯೂ, ಶವಪರೀಕ್ಷೆಯು ಅವಳ ದೇಹದ ಆಗಿರೋ ಗಾಯಗಳ ಬಗ್ಗೆ ಅನುಮಾನಮೂಡಿಸಿತ್ತು.
ಭಾನುವಾರ, ಸೋನಾಲಿ ಫೋಗಟ್ ಅವರ ಕುಟುಂಬವು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಗೋವಾ ಪೊಲೀಸರು ನಡೆಸಿದ ತನಿಖೆಯಿಂದ ತೃಪ್ತರಾಗದ ಕಾರಣ ಕೇಂದ್ರ ಏಜೆನ್ಸಿಯಿಂದ ತನಿಖೆ ನಡೆಸುವಂತೆ ಕೋರಿತು.