ನವದೆಹಲಿ : ಸರ್ಕಾರ ಮತ್ತು ಎಲ್ಐಸಿ ಐಡಿಬಿಐ ಬ್ಯಾಂಕ್ನಲ್ಲಿ ತಮ್ಮ ಪಾಲನ್ನ ಮಾರಾಟ ಮಾಡಲು ಯೋಚಿಸುತ್ತಿವೆ. ಎಷ್ಟು ಪಾಲನ್ನ ಮಾರಾಟ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮನಿ ಕಂಟ್ರೋಲ್ ಒಂದು ಮೂಲವನ್ನ ಉಲ್ಲೇಖಿಸುವ ಮೂಲಕ ಈ ಮಾಹಿತಿಯನ್ನ ನೀಡಿದೆ. ಸರ್ಕಾರ ಮತ್ತು ಎಲ್ಐಸಿ ಒಟ್ಟಾಗಿ ಐಡಿಬಿಐನಲ್ಲಿ ಶೇಕಡಾ 94ರಷ್ಟು ಪಾಲನ್ನ ಹೊಂದಿವೆ.
ವರದಿಗಳ ಪ್ರಕಾರ, ಐಡಿಬಿಐ ಬ್ಯಾಂಕ್ನಲ್ಲಿನ ತನ್ನ 51 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರ ಪರಿಗಣಿಸುತ್ತಿದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಷೇರು ಮಾರಾಟದ ಬಗ್ಗೆ ಅಂತಿಮ ನಿರ್ಧಾರವನ್ನ ಸಚಿವರ ಗುಂಪು ತೆಗೆದುಕೊಳ್ಳುತ್ತದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ, ಸರ್ಕಾರವು ಅದರಿಂದ ಖರೀದಿದಾರರನ್ನ ನಿರ್ಧರಿಸಬಹುದು ಎಂದು ಹೇಳಲಾಗ್ತಿದೆ.