ನವದೆಹಲಿ : ಸಿಬಿಎಸ್ಇ 12ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷಾ ಫಲಿತಾಂಶವನ್ನ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್, results.cbse.nic.in, results.gov.in ಮತ್ತು cbse.gov.in ಭೇಟಿ ನೀಡುವ ಮೂಲಕ ತಮ್ಮ ಅಂಕಗಳನ್ನ ಪರಿಶೀಲಿಸಬಹುದು. ಅಂದ್ಹಾಗೆ, ಮಂಡಳಿಯು ಆಗಸ್ಟ್ 23 ರಿಂದ ಆಗಸ್ಟ್ 29 ರವರೆಗೆ 10 ಮತ್ತು 12 ನೇ ತರಗತಿಗಳಿಗೆ ಕಂಪಾರ್ಟ್ಮೆಂಟ್ ಪರೀಕ್ಷೆಗಳನ್ನ ನಡೆಸಿತ್ತು.
ರಿಸಲ್ಟ್ ಚೆಕ್ ಮಾಡುವುದು ಹೇಗೆ.?
* cbse.gov.in ರಂದು ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* ಮುಖಪುಟದಲ್ಲಿ ಲಭ್ಯವಿರುವ ಫಲಿತಾಂಶಗಳ ಲಿಂಕ್ ಕ್ಲಿಕ್ ಮಾಡಿ.
* ಲಾಗಿನ್ ವಿವರಗಳನ್ನ ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಫಲಿತಾಂಶವು ಪರದೆಯ ಮೇಲೆ ಪ್ರದರ್ಶಿತವಾಗುತ್ತದೆ.
* ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ ಲೋಡ್ ಮಾಡಿ.
ಅಂಕಗಳನ್ನ ಪರಿಶೀಲಿಸಲು ಈ ವೆಬ್ಸೈಟ್ಗೆ ಭೇಟಿ ನೀಡಿ.!
* cbseresults.nic.in
* cbse.gov.in.
ನೀವು ಕಂಪಾರ್ಟ್ಮೆಂಟ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಮಾಡುವುದು ಏನು.?
* ಕಂಪಾರ್ಟ್ಮೆಂಟ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಮತ್ತು ಅದಕ್ಕೆ ಹಾಜರಾಗದ ಅಭ್ಯರ್ಥಿಯನ್ನ ಈ ಪರೀಕ್ಷೆಯಲ್ಲಿ ‘ಫೇಲ್’ ಎಂದು ಪರಿಗಣಿಸಲಾಗುತ್ತದೆ.
* ನಿಗದಿಪಡಿಸಿದ ಕೋರ್ಸ್ʼಗಳು ಮತ್ತು ಪಠ್ಯಕ್ರಮದ ಪ್ರಕಾರ ಅವನು / ಅವಳು ಮತ್ತೆ ಪರೀಕ್ಷೆ ಬರೆಯಬೇಕಾಗುತ್ತೆ.