ಬೆಂಗಳೂರು : ನಾಳೆಯಿಂದ ಎಲ್ಲಾ ಅರ್ಹ ಫಲಾನುಭವಿಗಳು ಕಾರ್ಬೆವ್ಯಾಕ್ಸ್ ಲಸಿಕೆಯನ್ನ ಮುನ್ನೆಚ್ಚರಿಕೆ ಡೋಸ್ ಆಗಿ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬೋದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಬೂಸ್ಟರ್ ಡೋಸ್ ನೀಡಿಕೆ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ “ರಾಜ್ಯದಲ್ಲಿ ನಿನ್ನೆಯಿಂದ ಅಂದ್ರೆ ಆಗಸ್ಟ್ 10ರಿಂದ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕಾರಣವನ್ನ ಆರಂಭಿಸಿಲಾಗಿದ್ದು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗ್ತಿದೆ. ಅದ್ರಂತೆ, ನಾಳೆಯಿಂದ ಎಲ್ಲಾ ಅರ್ಹ ಫಲಾನುಭವಿಗಳು ಕಾರ್ಬೆವ್ಯಾಕ್ಸ್ ಲಸಿಕೆಯನ್ನ ಮುನ್ನೆಚ್ಚರಿಕೆ ಡೋಸ್ ಆಗಿ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬೋದು” ಎಂದಿದೆ.
ಅಂದ್ಹಾಗೆ, ದೇಶದಲ್ಲಿ ಜುಲೈ 15 ರಿಂದ ಸೆಪ್ಟಂಬರ್ 30ರವರೆಗೆ ಅಂದ್ರೆ 75 ದಿನಗಳ ಕೋವಿಡ್ ಲಸಿಕಾ ಅಮೃತ್ ಮಹೋತ್ಸವದ ಅಂಗವಾಗಿ 18-59 ವರ್ಷದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗ್ತಿದೆ. ಇನ್ನು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣದ ಕಾಲವಧಿಯನ್ನ 9 ತಿಂಗಳು / 36 ವಾರಗಳಿಂದ 6 ತಿಂಗಳು/26 ವಾರಗಳಿಗೆ ಪರಿಷ್ಕರಿಸಲಾಗಿದೆ. ಅದ್ರಂತೆ, ನಾಳೆಯಿಂದ ರಾಜ್ಯದಲ್ಲಿ ಎಲ್ಲ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಆರಂಭವಾಗಲಿದ ಎಂದು ಸರ್ಕಾರದ ಮಾರ್ಗಸೂಚಿ ತಿಳಿಸಿದೆ.