ಮೊರ್ಬಿ : ಗುಜರಾತ್ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಕೇಬಲ್ ಸೇತುವೆ ಕುಸಿದು ಬಿದ್ದ ಪರಿಣಾಮ ದೊಡ್ಡ ಅಪಘಾತವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಅನೇಕ ಜನರು ನದಿಗೆ ಬಿದ್ದಿದ್ದು, ಘಟನೆ ವರದಿಯಾದ ತಕ್ಷಣ ಪೊಲೀಸರು ಮತ್ತು ಆಡಳಿತ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನ ಪ್ರಾರಂಭಿಸಿತು.
ಅಪಘಾತದ ಸಮಯದಲ್ಲಿ ಸೇತುವೆಯಲ್ಲಿ ಸುಮಾರು 400 ರಿಂದ 500 ಜನರು ಇದ್ದರು ಎಂದು ಹೇಳಲಾಗುತ್ತಿದೆ. ಈ ಸೇತುವೆಯು ಸಾಕಷ್ಟು ಹಳೆಯದಾಗಿದ್ದು, ಕೆಲವು ದಿನಗಳ ಹಿಂದೆ ದುರಸ್ತಿಗೊಳಿಸಲಾಯಿತು. ಇದನ್ನು ಐದು ದಿನಗಳ ಹಿಂದೆ ಸಾರ್ವಜನಿಕರಿಗೆ ಮತ್ತೆ ತೆರೆಯಲಾಯಿತು.
#WATCH | Several people feared to be injured after a cable bridge collapsed in the Machchhu river in Gujarat's Morbi area today. Further details awaited. pic.twitter.com/hHZnnHm47L
— ANI (@ANI) October 30, 2022