ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವ್ರಿಗೆ ಸಿಎಂ ಕಚೇರಿಯಲ್ಲಿ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಸಿಎಂ ಬೊಮ್ಮಾಯಿ , “ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲೂಕಿನ ಮಣಿಕ್ಕಾರ್ ಅಂಚೆಯ ಬೆಳ್ಳಾರಿ ಗ್ರಾಮದ ನೆಟ್ಟಾರು ಹೌಸ್ ನಿವಾಸಿಯಾದ ಶ್ರೀಮತಿ ನೂತನ ಕುಮಾರಿ ಅವ್ರಿಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಹಿರಿಯ ಸಹಾಯಕ ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸುವಂತೆ“ ಆದೇಶಿಸಿದ್ದಾರೆ.
ಅಂದ್ಹಾಗೆ, 26 ರಂದು ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವ್ರನ್ನ ಹಂತಕರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದು, ಇದು ಇಡೀ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಈ ವೇಳೆ ಪ್ರವೀಣ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ ಸಿಎಂ ಬೊಮ್ಮಾಯಿ ಕುಟುಂಬಕ್ಕೊಂದು ಉದ್ಯೋಗದ ಆಧಾರ ನೀಡಲು ಪ್ರವೀಣ್ ಪತ್ನಿಗೆ ಸರ್ಕಾರದ ಹುದ್ದೆಯನ್ನ ಕೊಡುವ ಭರವಸೆ ನೀಡಿದ್ದರು. ಅದ್ರಂತೆ ಸಧ್ಯ ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರಿತ ಸರ್ಕಾರಿ ಹುದ್ದೆಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.