ನವದೆಹಲಿ : ರಾಷ್ಟ್ರ ರಾಜಧಾನಿಯ ಝಂಡೆವಾಲನ್ನಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿ ಮತ್ತು ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಬಾಂಬ್ ಬೆದರಿಕೆಯ ಪ್ರಕರಣ ಬೆಳಕಿಗೆ ಬಂದಿದೆ. ದೂರು ಬಂದ ಕೂಡಲೇ ಪೊಲೀಸರು ವಿಹಿಂಪ ಕಚೇರಿಗೆ ತೆರಳಿ ಆರೋಪಿ ರಾಮ್ ಕುಮಾರ್ʼನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಧ್ಯ ದೆಹಲಿ ಪೊಲೀಸರ ಪ್ರಕಾರ, ಮಧ್ಯಾಹ್ನ 12.41ಕ್ಕೆ, ಝಂಡೆವಾಲನ್ ದೇವಾಲಯದ ಎರಡನೇ ಮಹಡಿಯಲ್ಲಿರುವ ವಿಶ್ವ ಹಿಂದೂ ಪರಿಷತ್ನ ಪದಾಧಿಕಾರಿಗಳಿಗೆ ಯಾರೋ ಒಬ್ಬರು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಸ್ಥಳಕ್ಕೆ ತಲುಪಿದಾಗ, ರಾಮ್ ಕುಮಾರ್ ಪಾಂಡೆ ಎಂಬ ವ್ಯಕ್ತಿಯನ್ನ ಪತ್ತೆಹಚ್ಚಲಾಯಿತು, ಆತನನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗ್ತಿದೆ.