ಮಂಗಳೂರು : ಮಂಗಳೂರಿನ ಆಟೋ ಬಾಂಬ್ ಸ್ಪೋಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಸ್ಪೋಟಕ ಮಾಹಿತಿ ತಿಳಿದುಬಂದಿದ್ದು, ಶಂಕಿತ ಉಗ್ರ ಶಾರಿಕ್ ಜೊತೆಗೆ ಇನ್ನೊರ್ವ ಉಗ್ರ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ.
SHOCKING NEWS: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಣೆ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಂಗಳೂರು ಆಟೋ ಬ್ಲಾಸ್ಟ್ ಗೂ ಮುನ್ನ ಶಾರಿಕ್ ನ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಡೀಲ್ ಬಸ್ ನಿಲ್ದಾಣದ ಬಳಿಕ ನಾಗನುರಿ ಬಳಿ ಕೆಂಪು ಶರ್ಟ್, ಟೋಪಿ ಹಾಕಿಕೊಂಡಿದ್ದ ಶಾರಿಕ್ ಜೊತೆಗೆ ಮತ್ತೊಬ್ಬ ಉಗ್ರ ಇದ್ದ ಎನ್ನುವ ಸಂಶಯ ಮೂಡಿದೆ. ಮಂಗಳೂರು ಆಟೋದಲ್ಲಿ ಸ್ಪೋಟಗೊಂಡ ಬಳಿಕ ಶಾರಿಕ್ ಗಾಯಗೊಂಡಿದ್ದರೆ, ಮತ್ತೊರ್ವ ಆರೋಪಿ ಸ್ಪೋಟದ ಬೆನ್ನಲ್ಲೇ ಪರಾರಿಯಾಗಿರುವ ಅನುಮಾನ ಮೂಡಿಸಿದೆ.
ಇನ್ನು ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಇಶಾ ಫೌಂಡೇಶನ್ ಶಿವನ ಫೋಟೋ ಇಟ್ಟುಕೊಂಡಿದ್ದ. ಈತನ ನಡುವಳಿಕೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ವೇಷ ಭೂಷಣ, ಬಟ್ಟೆ, ನಡೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ಮೊಬೈಲ್ ತರಬೇತಿ ಕ್ಲಾಸ್ ಗೆ ಬಂದರೂ ಯಾವಾಗಲೂ ಬಾಗಿಲ ಕಡೆ ನೋಡುತ್ತಿದ್ದ. ಮೊಬೈಲ್ ರಿಪೇರಿ ಕಲಿಯಲು 10 ಮೊಬೈಲ್ ಖರೀದಿಸಿದ್ದ ಶಾರೀಕ್ ಪೂರ್ಣ ಪ್ರಮಾಣದಲ್ಲಿ ಮೊಬೈಲ್ ತರಬೇತಿ ಪಡೆದಿರಲಿಲ್ಲ. ಇದೀಗ ಕೃತ್ಯ ಕಂಡು ನನಗೆ ಶಾಕ್ ಆಗಿದೆ. ಶಾರಿಕ್ ಕುರಿತು ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ತರಬೇತಿ ಸಂಸ್ಥೆ ಮಾಲೀಕ ಪ್ರಸಾದ್ ತಿಳಿಸಿದ್ದಾರೆ.