ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ನಲ್ಲಿ ನಡೆದ ಎರಡು ಹಂತಗಳಲ್ಲಿ ನಡೆದ ಮತದಾನದ ಮತ ಎಣಿಕೆ ಮುಂದುವರೆದಿದ್ದು, 182 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮುಕ್ತಾಯವಾಗುತ್ತಿದ್ದಂತೆ ಇಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಸ್ತುತ, ಆಡಳಿತ ಪಕ್ಷವಾದ ಬಿಜೆಪಿ 7ನೇ ಬಾರಿಗೆ ಗಮನಾರ್ಹ ಗೆಲುವಿನ ಸನಿಹದಲ್ಲಿದೆ, ಈ ಮೂಲಕ 1985ರ ಕಾಂಗ್ರೆಸ್ ದಾಖಲೆಯನ್ನ ಮುರಿಯಲಿದೆ. ಅದ್ರಂತೆ, ಬಿಜೆಪಿ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ತವರು ರಾಜ್ಯವಾದ ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ವಿಜಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವ್ರ ಇಂದು ಸಂಜೆ 6 ಗಂಟೆಗೆ ವಿಜಯೋತ್ಸವ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂದ್ಹಾಗೆ, ಬಿಜೆಪಿ ನಾಯಕ ಮತ್ತು ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗುಜರಾತ್’ನ 17 ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತೀಯ ಜನತಾ ಪಕ್ಷವು ಗುಜರಾತ್’ನಲ್ಲಿ ಪ್ರಚಂಡ ಚುನಾವಣಾ ಗೆಲುವಿಗೆ ಸಜ್ಜಾಗಿದೆ. ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್ನ 182 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
BREAKING NEWS : ಬೆಳಗಾವಿ ಗಡಿ ವಿವಾದ : ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚಿಸಿದ್ದೇನೆ ಎಂದ ಸಿಎಂ ಬೊಮ್ಮಾಯಿ
‘ದೇವದಾಸಿ ಪದ್ದತಿ’ಯ ನಿರ್ಮೂಲನಕ್ಕೆ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ – ಸಚಿವ ಹಾಲಪ್ಪ ಆಚಾರ್