ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಭಗುಲೆದ್ದ ಹಿನ್ನೆಲೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರ ರೇಸ್ನಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ.
ಅದ್ರಂತೆ, ಸಧ್ಯ ದಿಗ್ವಿಜಯ್ ಸಿಂಗ್, ಕಮಲ್ ನಾಥ್, ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಖರ್ಗೆ ಅವರಂತಹ ದೊಡ್ಡ ನಾಯಕರು ಕಾಂಗ್ರೆಸ್ ಅಧ್ಯಕ್ಷ ರೇಸ್ನಲ್ಲಿ ಉಳಿಯಲಿದ್ದಾರೆ. ಈ ನಡುವೆ ಕೇಂದ್ರ ನಾಯಕತ್ವದ ಅಂತಿಮ ನಿರ್ಧಾರಕ್ಕಾಗಿ ಅಶೋಕ್ ಗೆಹ್ಲೋಟ್ ಇನ್ನೂ ಕಾಯಲಿದ್ದಾರೆ ಎನ್ನಲಾಗ್ತಿದೆ.
ಅಶೋಕ್ ಗೆಹ್ಲೋಟ್ ಈಗ ಕಾಂಗ್ರೆಸ್ ಅಧ್ಯಕ್ಷರ ರೇಸ್ನಿಂದ ಹೊರಗುಳಿದಿದ್ದಾರೆ. ದಿಗ್ವಿಜಯ್ ಸಿಂಗ್ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಮಲ್ ನಾಥ್ ಅವರನ್ನೂ ದೆಹಲಿಗೆ ಕರೆಸಿಕೊಳ್ಳಲಾಗಿದೆ. ಇವುಗಳ ಹೊರತಾಗಿ ಸಿಡಬ್ಲ್ಯೂಸಿಯ ಮೊದಲ ಜಿ-23 ಪತ್ರದಲ್ಲಿ ಮುಕುಲ್ ವಾಸ್ನಿಕ್ ಹೆಸರನ್ನ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದ್ದು, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಯ್ಕೆ ಮಲ್ಲಿಕಾರ್ಜುನ ಖರ್ಗೆಯಾಗಿದೆ.
ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರ ಆಯ್ಕೆಯಾಗಿ ಸುಶೀಲ್ ಕುಮಾರ್ ಶಿಂಧೆ ಆಯ್ಕೆಯಾಗಿದ್ದಾರೆ. ಇನ್ನು ಅಶೋಕ್ ಗೆಹ್ಲೋಟ್ ಕೇಂದ್ರ ನಾಯಕತ್ವದ ಅಂತಿಮ ಮಾತಿಗಾಗಿ ಕಾಯಲಿದ್ದಾರೆ.