ನವದೆಹಲಿ : ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) 2023ರ ಜನವರಿಯಿಂದ ಎಲ್ಲಾ ಮಾದರಿಗಳಲ್ಲಿ ತನ್ನ ಕಾರುಗಳ ಬೆಲೆಯನ್ನ ಹೆಚ್ಚಿಸುವುದಾಗಿ ಶುಕ್ರವಾರ ಹೇಳಿದೆ. ಒಟ್ಟಾರೆ ಹಣದುಬ್ಬರದಿಂದ ಪ್ರೇರಿತವಾದ ಹೆಚ್ಚಿದ ವೆಚ್ಚದ ಒತ್ತಡದಿಂದಾಗಿ ಈ ಬೆಲೆ ಏರಿಕೆಯಾಗಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ. ಈ ಹೆಚ್ಚಳವು ವಿಭಿನ್ನ ಮಾದರಿಗಳಿಗೆ ಬದಲಾಗುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯು “ಒಟ್ಟಾರೆ ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಅವಶ್ಯಕತೆಗಳಿಂದ ಪ್ರೇರಿತವಾದ ಹೆಚ್ಚಿನ ವೆಚ್ಚದ ಒತ್ತಡಕ್ಕೆ ಸಾಕ್ಷಿಯಾಗಿದೆ. ವೆಚ್ಚವನ್ನ ಕಡಿಮೆ ಮಾಡಲು ಮತ್ತು ಹೆಚ್ಚಳವನ್ನ ಭಾಗಶಃ ಸರಿದೂಗಿಸಲು ಕಂಪನಿಯು ಗರಿಷ್ಠ ಪ್ರಯತ್ನವನ್ನ ಮಾಡುತ್ತಿದ್ದರೂ, ಬೆಲೆ ಏರಿಕೆಯ ಮೂಲಕ ಕೆಲವು ಪರಿಣಾಮಗಳನ್ನ ವರ್ಗಾಯಿಸುವುದು ಅನಿವಾರ್ಯವಾಗಿದೆ” ಎಂದಿದೆ.
Indian Calendar 2023 : ‘2023’ರಲ್ಲಿ ಬರುವ ಪ್ರಮುಖ ದಿನ, ಹಬ್ಬ & ರಜಾ ದಿನಗಳ ಮಾಹಿತಿ ಇಲ್ಲಿದೆ
BREAKING NEWS : ‘ಕಾಬೂಲ್’ನಲ್ಲಿರೋ ‘ಪಾಕ್ ರಾಯಭಾರ ಕಚೇರಿ’ ಮೇಲೆ ದಾಳಿ |Pakistan’s Embassy In Kabul Attack