ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಿ20 ಏಷ್ಯಾ ಕಪ್ (Asia Cup)ನ ಸೂಪರ್ -4ರ ದೊಡ್ಡ ಪಂದ್ಯಕ್ಕೂ ಮೊದಲು ಪಾಕಿಸ್ತಾನವು ದೊಡ್ಡ ಹಿನ್ನಡೆಯನ್ನ ಅನುಭವಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 4ರ ಭಾನುವಾರ ನಡೆಯಲಿದೆ. ವೇಗದ ಬೌಲರ್ ಶಹನವಾಜ್ ದಹಾನಿ ಗಾಯದಿಂದಾಗಿ ಈ ಪಂದ್ಯವನ್ನ ಆಡಲು ಸಾಧ್ಯವಾಗುವುದಿಲ್ಲ. ದಹಾನಿಗೆ ಸೈಡ್ ಸ್ಟ್ರೈನ್ʼನ ಸಮಸ್ಯೆಗಳಿದ್ದು, ಮುಂದಿನ 48 ರಿಂದ 72 ಗಂಟೆಗಳಲ್ಲಿ, ಅವರ ಮುಂದಿನ ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.
ಇದಕ್ಕೂ ಮುನ್ನ ವೇಗದ ಬೌಲರ್ಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಮ್ ಗಾಯದ ಕಾರಣ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಇನ್ನು ದಹಾನಿ ಬದಲಿಗೆ ಹಸನ್ ಅಲಿ ಭಾರತದ ವಿರುದ್ಧ ಅವಕಾಶ ಪಡೆಯಬಹುದು. ಗುಂಪು ಸುತ್ತಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಗಳಿಂದ ಪಾಕಿಸ್ತಾನವನ್ನ ಸೋಲಿಸಿತು.