ಲಖನೌ : ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರ ಮೇಲಿನ ಸಸ್ಪೆನ್ಸ್ ಕೊನೆಗೊಂಡಿದ್ದು, ಯೋಗಿ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದ ಭೂಪೇಂದ್ರ ಚೌಧರಿ ಅವರನ್ನ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. 2024ರ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು, ಬಿಜೆಪಿ ರಾಜ್ಯದ ಅಧಿಕಾರವನ್ನ ಈ ನಾಯಕನಿಗೆ ನೀಡಿದೆ ಎಂದು ಹೇಳಲಾಗುತ್ತಿದೆ. ಭೂಪೇಂದ್ರ ಚೌಧರಿ ಅವರು ಆರ್ಎಸ್ಎಸ್ನೊಂದಿದೆ ಸಂಬಂಧ ಹೊಂದಿದ್ದು, ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವಿದೆ.
ಸ್ವತಂತ್ರ ದೇವ್ ಸಿಂಗ್ ಅವ್ರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತ್ರ ಅವ್ರ ರಾಜೀನಾಮೆಯಿಂದ ತೆರವಾದ ರಾಜ್ಯಾಧ್ಯಕ್ಷ ಹುದ್ದೆಗೆ ಚೌಧರಿ ನೇಮಕವಾಗಿದ್ದಾರೆ. ವಾಸ್ತವವಾಗಿ, ಭಾರತೀಯ ಜನತಾ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ತತ್ವವಾಗಿದ್ದು, ಸ್ವತಂತ್ರ ದೇವ್ ಸಿಂಗ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.