ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೈತಿಕ ಅಧಿಕಾರಿ ವಿನೀತ್ ಸರನ್ ಅವರು ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ ಹಿತಾಸಕ್ತಿ ಸಂಘರ್ಷದ ನೋಟಿಸ್ ಕಳುಹಿಸಿದ್ದಾರೆ. ತಮ್ಮ ವಿರುದ್ಧದ ಹಿತಾಸಕ್ತಿ ಸಂಘರ್ಷದ ಆರೋಪಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 20ರೊಳಗೆ ಲಿಖಿತ ಉತ್ತರ ನೀಡುವಂತೆ ಶರಣ್, ಬಿನ್ನಿ ಅವ್ರಿಗೆ ಸೂಚಿಸಿದ್ದಾರೆ.
ಭಾರತೀಯ ಕ್ರಿಕೆಟ್’ನ ದೇಶೀಯ ಋತುವಿನ ಮಾಧ್ಯಮ ಹಕ್ಕುಗಳನ್ನ ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ನಲ್ಲಿ ತನ್ನ ಸೊಸೆ ಕೆಲಸ ಮಾಡುತ್ತಿರುವುದರಿಂದ ಬಿನ್ನಿ ಹಿತಾಸಕ್ತಿ ಸಂಘರ್ಷವನ್ನ ಹೊಂದಿದ್ದಾರೆ ಎಂದು ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದಾರೆ.
“ನಿಮ್ಮ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ನಿಯಮ 38 (1) (1) ಮತ್ತು ನಿಯಮ 38 (2) ಉಲ್ಲಂಘನೆಗೆ ಸಂಬಂಧಿಸಿದಂತೆ ಬಿಸಿಸಿಐನ ನೈತಿಕ ಅಧಿಕಾರಿಗೆ ದೂರು ಬಂದಿದೆ ಎಂದು ಈ ಮೂಲಕ ನಿಮಗೆ ತಿಳಿಸಲಾಗಿದೆ” ಎಂದು ಸರನ್ ನವೆಂಬರ್ 21 ರಂದು ಹೊರಡಿಸಿದ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಕೊರೊನಾದ ಮುಂದಿನ ರೂಪಾಂತರ ‘ಓಮಿಕ್ರಾನ್’ಗಿಂತ ಹೆಚ್ಚು ಮಾರಕ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ