ಕೆಎನ್ಎನ್ಡಿಜಿಲ್ ಡೆಸ್ಕ್ : ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಭಯೋತ್ಪಾದನಾ ನಿಗ್ರಹ ದಳ (ATS) ಮಹತ್ವದ ಕ್ರಮ ಕೈಗೊಂಡಿದೆ. ಇಲ್ಲಿಯವರೆಗೆ, ಎಟಿಎಸ್ ದಾಳಿಯಲ್ಲಿ 96 ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ಟು 200 ಸ್ಥಳಗಳಿಗೆ ದಾಳಿ ನಡೆಸಲಾಗಿದ್ದು, ರಾಜ್ಯ ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಹವಾಲಾ, ಡ್ರಗ್ಸ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಈ ಆರೋಪಿಗಳನ್ನ ಬಂಧಿಸಲಾಗುತ್ತಿದೆ.
ಎಟಿಎಸ್ ನೇತೃತ್ವದ ವಿವಿಧ ಏಜೆನ್ಸಿಗಳ ಜಂಟಿ ಕಾರ್ಯಾಚರಣೆಯಲ್ಲಿ, ರಾಜ್ಯದ 100ಕ್ಕೂ ಹೆಚ್ಚು ಕಂಪನಿಗಳಿಗೆ ಸಂಬಂಧಿಸಿದ ಸುಮಾರು 200 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ, ಸಂಬಂಧಿಸಿದ ಜನರನ್ನು ಪ್ರಶ್ನಿಸಲಾಗುತ್ತಿದೆ. ಎಟಿಎಸ್ ಹೊರತಾಗಿ, ರಾಜ್ಯ ಸರಕು ಮತ್ತು ಸೇವಾ ತೆರಿಗೆ (GST) ಇಲಾಖೆ, ಅಹಮದಾಬಾದ್ ಅಪರಾಧ ಶಾಖೆ ಈ ಪ್ರಮುಖ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್, ಭವನ್ ನಗರ್ ಮತ್ತು ಜಾಮ್ ನಗರ್ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 122 ಕಂಪನಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Gujarat ATS, in a joint operation with GST, carried out raids at 150 locations in districts like Surat, Ahmedabad, Jamnagar, Bharuch, and Bhavnagar. Investigations were being carried out over tax evasion and money trail on international routes: Sources
— ANI (@ANI) November 12, 2022
ಕತ್ತಲು ಹೆಚ್ಚಾದಾಗ ‘ಕಮಲ’ ಅರಳುತ್ತೆ ; ತೆಲಂಗಾಣದಲ್ಲಿ ‘TRS, KCR’ಗೆ ಪ್ರಧಾನಿ ಮೋದಿ ತರಾಟೆ
‘ಸಿಎಂ ಬೊಮ್ಮಾಯಿ ನೀವು ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದೀರಾ’? : ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ಧಾಳಿ
‘ಟ್ಯಾಟೂ’ ತೆಗೆಸಿದ್ರೆ ಮಾತ್ರ ಉದ್ಯೋಗ ನೀಡ್ತೇನೆ ಎಂದ ಅಧಿಕಾರಿ ; ಕೋರ್ಟ್ ಮೊರೆಯೋದ ಯುವಕ