ಮುಂಬೈ : ಪತ್ರಾ ಚಾಲ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಶಿವಸೇನೆ ಸಂಸದ ಸಂಜಯ್ ರಾವತ್ ಅವ್ರ ಪತ್ನಿ ವರ್ಷಾಗೆ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ರಾವತ್ ಇಡಿ ಕಸ್ಟಡಿಯನ್ನ ವಿಸ್ತರಿಸಿದ ಕೆಲವೇ ಗಂಟೆಗಳ ನಂತ್ರ ಸಮನ್ಸ್ ಬಂದಿದೆ.
ED summons Sanjay Raut's wife Varsha Raut in the Patra Chawl land case money laundering case. Summons issued after transactions done on Varsha Raut's account came to light: ED pic.twitter.com/8cUyE7Bcao
— ANI (@ANI) August 4, 2022
ಇನ್ನು ವರ್ಷಾ ರಾವತ್ ಖಾತೆಯಲ್ಲಿ ಮಾಡಿದ ವಹಿವಾಟುಗಳು ಬೆಳಕಿಗೆ ಬಂದ ನಂತ್ರ ಸಮನ್ಸ್ ನೀಡಲಾಗಿದೆ ಎಂದು ಇ.ಡಿ ಹೇಳಿದೆ. ನ್ಯಾಯಾಲಯದಲ್ಲಿ ಗುರುವಾರದ ವಿಚಾರಣೆಯ ಸಮಯದಲ್ಲಿ, ಇ.ಡಿ. ಸಂಬಂಧವಿಲ್ಲದ ವ್ಯಕ್ತಿಗಳಿಂದ ವರ್ಷಾ ರಾವತ್ ಖಾತೆಗೆ ₹1.08 ಕೋಟಿ ಮೌಲ್ಯದ ಹಣವನ್ನ ಸ್ವೀಕರಿಸಲಾಗಿದೆ ಎಂದು ಹೇಳಿದೆ.