ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಮಂಗಳವಾರ ಛೋಟಾಪೋರಾ ಪ್ರದೇಶದಲ್ಲಿರುವ ಸೇಬಿನ ತೋಟದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಭಯೋತ್ಪಾದಕರ ದಾಳಿಯಲ್ಲಿ ಒಬ್ಬ ಕಾಶ್ಮೀರಿ ಪಂಡಿತ್ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ಇಬ್ಬರೂ ನಾಗರಿಕರು ಅಲ್ಪಸಂಖ್ಯಾತ ಸಮುದಾಯದವರು ಎನ್ನಲಾಗ್ತಿದೆ.
2 Kashmiri Pandits shot at by terrorists in J-K orchard, 1 dies
Read @ANI Story |https://t.co/WdZs5TCkST#Kashmiripandit #Kashmiripanditshotdead #JammuAndKashmir pic.twitter.com/uBhRtSX6ne
— ANI Digital (@ani_digital) August 16, 2022
ಇನ್ನು ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಇಡೀ ಪ್ರದೇಶವನ್ನ ಸುತ್ತುವರಿದಿದ್ದಾರೆ. ಕಾಶ್ಮೀರ ವಲಯ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಈ ಭಯೋತ್ಪಾದಕರು, ಅರ್ಜುನ್ ನಾಥ್ ಪುತ್ರ ಸುನೀಲ್ ಕುಮಾರ್ ಮತ್ತು ಅವ್ರ ಸಹೋದರ ಪಿತಾಂಬರ್ ಅಲಿಯಾಸ್ ಪಿಂಟೋ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುನೀಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಅವ್ರ ಸಹೋದರ ಪಿಂಟೋರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಈ ಪ್ರದೇಶವನ್ನ ಸುತ್ತುವರಿಯಲಾಗಿದ್ದು, ಹಂತಕರನ್ನ ಹಿಡಿಯಲು ಗ್ರಾಮದಲ್ಲಿ ಹೆಚ್ಚುವರಿ ಪಡೆಗಳನ್ನ ನಿಯೋಜಿಸಲಾಗಿದೆ. ಸಹೋದರರಿಬ್ಬರೂ ಇಲ್ಲಿನ ಸ್ಥಳೀಯ ನಿವಾಸಿಗಳಾಗಿದ್ದು, ಅವರ ಸ್ವಗ್ರಾಮದಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತಿದೆ.