ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ 2ನೇ ಪ್ರಕರಣ ದಾಖಲಾದಂತಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಸಚಿವಾಲಯ ದೃಢಪಡಿಸಿದ್ದು, ಕೇರಳದಲ್ಲಿ ಮಂಕಿ ಪಾಕ್ಸ್ ನ ಎರಡನೇ ಪಾಸಿಟಿವ್ ಪ್ರಕರಣ ಕಣ್ಣೂರು ಜಿಲ್ಲೆಯಲ್ಲಿ ದೃಢಪಟ್ಟಿದೆ ಎಂದಿದೆ. ಅಂದ್ಹಾಗೆ ಈ ವ್ಯಕ್ತಿ ಇತ್ತಿಚಿಗಷ್ಟೇ ದುಬೈನಿಂದ ಕೇರಳದ ಕಣ್ಣೂರಿಗೆ ಆಗಮಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
"The second positive case of Monkey Pox in Kerala has been confirmed in Kannur District," confirms State Health Ministry
— ANI (@ANI) July 18, 2022
ಇನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವ್ರು ಕೂಡ ರಾಜ್ಯದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ ಎಂದು ಹೇಳಿದರು.
ಅಂದ್ಹಾಗೆ, ಜುಲೈ 12ರಂದು ಕೇರಳವು ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದ ಕೆಲವು ದಿನಗಳ ನಂತರ ಇದು ಬಂದಿದೆ. ಯುಎಇಯಿಂದ ಬಂದ 35 ವರ್ಷದ ವ್ಯಕ್ತಿ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಒಳಗಾದ ಮೊದಲ ರೋಗಿಯಾಗಿದ್ದಾರೆ.
ಜೂನೋಟಿಕ್ ರೋಗವು ಮುಖ್ಯವಾಗಿ ನಿಕಟ ಸಂಪರ್ಕದಿಂದ ಮಾತ್ರ ಹರಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಸಾವಿನ ಪ್ರಮಾಣವೂ ತುಂಬಾ ಕಡಿಮೆ ಇತ್ತು.