ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿ ಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ನಡುವೆ ಸಹಾಯವಾಣಿ 080-23460460ಗೆ ಕರೆ ಮಾಡಿದರೆ ಯಾವುದೇ ಸಂಪರ್ಕಸಾಧಿಸಲು ಸಾಧ್ಯವಾಗುತಿಲ್ಲ ಎನ್ನುವ ಆರೋಪವನ್ನು ಅನೇಕ ಮಂದಿ ಹೇಳುತ್ತಿದ್ದಾರೆ. ಇದಲ್ಲದೆ ಕ್ಯೂ ನಂಬರ್ ಒಂದಕ್ಕೆ ಕರೆ ಬಂದ ಕೂಡಲೇ ಕಾಲ್ ಡ್ರಾಪ್ ಆಗುತ್ತಿದ್ದು, ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೈತಿಕತೆಯನ್ನು ಪ್ರಶ್ನೆ ಮಾಡುವಂತಿದೆ.
ಇನ್ನೂ KEA ಅಧಿಕೃತ ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ, ಸಾರ್ವಜನಿಕ ಸಂಪರ್ಕಾಧಿಕಾರಿ , ಕರ್ನಾಟಕ ಪರೀಕ್ಷಾ ಪ್ರಾಧಿಕಾರ. ನಂಬರ್‌ಗಳು ಕೂಡ ಒಂದೇ ನಂಬರ್ ಅನ್ನು ಉಲ್ಲೇಖ ಮಾಡಿದ್ದು, ಬೇರೆ ನಂಬರ್‌ಗಳನ್ನು ಯಾಕೆ ನೀಡಿಲ್ಲ ಎನ್ನುವುದು ಈಗ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ KEA ಜನಪರವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಈಗ ಅನುಮಾನ ಮೂಡಿಸಿದೆ.







