ಚಿತ್ರದುರ್ಗ: ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ವಜಾ ಮಾಡಿದ್ದರು, ಈ ಮೂಲಕ ಅವರಿಗೆ ಎರಡನೇ ಪೋಕ್ಸೋದಲ್ಲಿ ಕೂಡ ಮುರುಘರಿಗೆ ಜೈಲೇ ಗತಿಯಾಗಿದೆ.
ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಗಾಗಲೇ ಜೈಲಲಿನಲ್ಲಿರುವ ಮುರುಘರ ವಿರುದ್ದ ಎರಡನೇಕೇಸ್ ದಾಖಲಾಗಿದ್ದು, ಎರಡನೇ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಬಾಲಕಿಯರ ತಾಯಿ ಒಡನಾಡಿ ಸಂಸ್ಥೆ ಮೊರೆ ಹೋಗಿದ್ದರು, ಇದೇ ವೇಳೆ ಅವರ ಸಹಾಯದಿಂದ ಕೇಸ್ ದಾಖಲಾಗಿತ್ತು. ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ತನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮುರುಘಾ ಶರಣರ ವಿರುದ್ಧ ಅಕ್ಟೋಬರ್ 14ರಂದು ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ