ಕೆಎನ್ಎನ್ಡಿಜಿಟಲ್ ಡೆಸ್ಕ್ : ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.
YSRTP ಅವ್ರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆ ನಡೆದಿದ್ದು, ನಂತ್ರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಬಂಧಿಸಿದ್ದಾರೆ.
ವೈಎಸ್ ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಪಾದಾಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಈ ನಿರ್ಧಾರವನ್ನ ಮೊದಲೇ ತೆಗೆದುಕೊಳ್ಳಲಾಗಿದೆ. ನರಸಂಪೇಟೆ ಕ್ಷೇತ್ರದ ಲಿಂಗಗಿರಿ ಬಳಿ ಶರ್ಮಿಳಾ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಚೆನ್ನರಾಯಪೇಟೆ ಮಂಡಲದ ಲಿಂಗಗಿರಿಯಲ್ಲಿ ಊಟದ ವಿರಾಮದ ವೇಳೆ ಕೆಲವರು ಬೆಂಗಾವಲು ಪಡೆಯಲ್ಲಿ ಬಸ್ಗೆ ಬೆಂಕಿ ಹಚ್ಚಿದ್ದಾರೆ. ಶರ್ಮಿಳಾ ಅವ್ರ ಪಾದಯಾತ್ರೆ ವಾಹನಗಳ ಮೇಲೆ ಕಲ್ಲು ತೂರಲಾಗಿದ್ದು, ಹಲವು ಕಾರಿನ ಗಾಜುಗಳು ಧ್ವಂಸಗೊಂಡಿವೆ. ಶರ್ಮಿಳಾ ಗೋ ಬ್ಯಾಕ್ ಎಂದು ಘೋಷಣೆ ಕೂಗಿಲಾಯಿತು. ಪ್ರಜಾ ಪ್ರಸ್ಥಾನಂ ಪಾದಯಾತ್ರೆ ನಿಲ್ಲಿಸಲು ಉದ್ವಿಗ್ನತೆ ಸೃಷ್ಟಿಸಲು ಈ ಬಂಧನ ಮಾಡಲಾಗಿದೆ ಎಂದು ಶರ್ಮಿಳಾ ಆರೋಪಿಸಿದ್ದಾರೆ. ಪಾದಯಾತ್ರೆ ವೇಳೆ ಶಾಂತಿ ಮತ್ತು ಭದ್ರತೆ ಸಮಸ್ಯೆ ಸೃಷ್ಟಿಸಲು ಹಾಗೂ ಯಾತ್ರೆಗೆ ತಡೆಯೊಡ್ಡಲು ಬಸ್ ಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.
https://t.co/qogJyIbl8x
ప్రజలపక్షాన పోరాడుతున్న నన్ను అరెస్ట్ చేసేందుకు టీఆర్ఎస్ ప్రభుత్వం కుట్ర పన్నుతోంది. పోలీసులను పనివాళ్లలా వాడుకుంటూ.. టీఆర్ఎస్ గూండాలను ఉసిగొల్పుతోంది. బస్సులు తగలబెడుతూ, దాడులకు పాల్పడుతోంది. ఇది ప్రజాస్వామ్యమా? తాలిబన్ల రాజ్యమా?#Narsampet— YS Sharmila (@realyssharmila) November 28, 2022
BIGG NEWS: ಬಿಜೆಪಿಯವರು ಹಳ್ಳಿಗಳಲ್ಲಿ ಕೋಮುಗಲಭೆ ಹುಟ್ಟು ಹಾಕುತ್ತಿದ್ದಾರೆ; ಡಿ.ಕೆ. ಶಿವಕುಮಾರ್
BIGG NEWS: ಬಿಜೆಪಿಯವರು ಹಳ್ಳಿಗಳಲ್ಲಿ ಕೋಮುಗಲಭೆ ಹುಟ್ಟು ಹಾಕುತ್ತಿದ್ದಾರೆ; ಡಿ.ಕೆ. ಶಿವಕುಮಾರ್