ಬೆಂಗಳೂರು : 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಧ್ಯ ಸಿಐಡಿ ಕಸ್ಟಡಿಯಲ್ಲಿ ADGP ಅಮೃತ್ ಪಾಲ್ ಇಂದು ಕೋರ್ಟ್ ಹಾಜರು ಪಡೆಸಲಾಗಿತ್ತು. ಸಧ್ಯ ನ್ಯಾಯಾಲಯದ ಆದೇಶ ಹೊರ ಬಿದ್ದಿದ್ದು, ಮತ್ತೆ ಮೂರು ದಿನ ಕಸ್ಟಡಿ ಅವಧಿಯನ್ನ ವಿಸ್ತರಿಸಿದೆ.
ಎಡಿಜಿಪಿ ಅಮೃತ್ ಪಾಲ್ ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ಗೆ ಸಿಐಡಿ ಅಧಿಕಾರಿಗಳು ಹಾಜರು ಪಡೆಸಿದ್ದು, ಸಧ್ಯ ಮತ್ತೆ ಮೂರು ದಿನ ಸಿಐಡಿ ಕಸ್ಟಡಿ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಇನ್ನು ದಿನದಲ್ಲಿ 30 ನಿಮಿಷ ವೈದ್ಯರು, ಕುಟುಂಬಸ್ಥರ ಭೇಟಿಗೆ ಅನುಮತಿ ನೀಡಿದೆ. ಅಂದ್ಹಾಗೆ, ಜು.4ರಂದು ಸಿಐಡಿ ADGP ಅಮೃತ್ ಪಾಲ್ ಬಂಧಿಸಿತ್ತು.