ಕೆಎನ್ಎನ್ಡಿಜಿಟಲ್ ಡೆಸ್ಕ್ : ಖ್ಯಾತ ಬಹುಭಾಷಾ ನಟಿ ಹಾಗೂ ಮಾಜಿ ಶಾಸಕಿ ಜಯಸುಧಾ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಎರಡು ದಿನಗಳಿಂದ ಜಯಸುಧಾ ಅವರೊಂದಿಗೂ ಬಿಜೆಪಿ ಸಂಪರ್ಕದಲ್ಲಿದೆ. ಇನ್ನು ಬಿಜೆಪಿ ನಾಯಕರು ಈಗಾಗಲೇ ಅವ್ರನ್ನ ಬಿಜೆಪಿಗೆ ಸೇರುವಂತೆ ವಿನಂತಿಸಿದ್ದಾರೆ ಎನ್ನಲಾಗ್ತಿದೆ.
ಈ ಹಿಂದೆ ಸಿಕಂದರಾಬಾದ್ʼನಿಂದ ಕಾಂಗ್ರೆಸ್ ಶಾಸಕಿಯಾಗಿ ಜಯಸುಧಾ ಗೆದ್ದಿದ್ದರು. ಸಧ್ಯ ಅವ್ರು ಚಲನಚಿತ್ರಗಳು ಮತ್ತು ರಾಜಕೀಯದಿಂದ ದೂರವಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ಜಯಸುಧಾರನ್ನ ಸಂಪರ್ಕಿಸಿದ್ದು, ಬಿಜೆಪಿ ಸೇರುವಂತೆ ಮನವೋಲಿಸುತ್ತಿದ್ದಾರೆ ಎನ್ನಲಾಗಿದೆ. ಅದ್ರಂತೆ, ಕಳೆದ ವರ್ಷ ನಟಿ ವಿಜಯಶಾಂತಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದು, ಈಗ ಜಯಸುಧಾ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.