ಕೆಎನ್ಎನ್ಡಿಜಿಟಲ್ ಡೆಸ್ಕ್ : ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್, ಫುಟ್ಬಾಲ್ ದಂತಕತೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನ ‘ಒಪ್ಪಂದದ ಉಲ್ಲಂಘನೆ’ ಆರೋಪದ ಮೇಲೆ ಕ್ಲಬ್’ನಿಂದ ಉಚ್ಚಾಟಿಸಲು ಸಜ್ಜಾಗಿದೆ ಎಂದು ವರದಿ ಮಾಡಿದೆ. ಒಪ್ಪಂದದ ಉಲ್ಲಂಘನೆಯ ನಂತರ ಕ್ಲಬ್ ತನ್ನ ವೇತನದ ಉಳಿದ 16 ಮಿಲಿಯನ್ ಪೌಂಡ್’ಗಳನ್ನು ಅವರಿಗೆ ಪಾವತಿಸುವುದಿಲ್ಲ ಎಂದು ವರದಿ ಸೂಚಿಸುತ್ತದೆ.
ಅಂದ್ಹಾಗೆ, ಇತ್ತೀಚಿಗೆ ಬ್ರಿಟಿಷ್ ಪತ್ರಕರ್ತನೊಂದಿಗೆ ಸ್ಫೋಟಕ ಟಿವಿ ಸಂದರ್ಶನದಲ್ಲಿ, ಫುಟ್ಬಾಲ್ ಸೂಪರ್ಸ್ಟಾರ್ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಬಾಸ್ ಎರಿಕ್ ಟೆನ್ ಹೈಗ್ ಅವರನ್ನ “ದ್ರೋಹ” ಮಾಡಿದ್ದಾರೆ ಎಂದು ಟೀಕಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ತನಗೆ ಅರ್ಹವಾದ ಗೌರವವನ್ನ ನೀಡುತ್ತಿಲ್ಲ ಎಂದು ಆರೋಪಿಸಿದ ನಂತ್ರ ಈ 37 ವರ್ಷದ ಆಟಗಾರ ವಿಶ್ವದ ಗಮನ ಸೆಳೆದರು. ಕ್ಲಬ್’ನಲ್ಲಿ ನಡೆದ ಎಲ್ಲಾ ತಪ್ಪುಗಳಿಗಾಗಿ ಆರೋಪ ಎದುರಿಸುತ್ತಿರುವ “ಕಪ್ಪು ಕುರಿ”ಯಾಗಿ ತನ್ನನ್ನ ಮಾಡಲಾಯಿತು ಎಂದು ಹೇಳಿದ್ದರು.
BIGG NEWS : ನಾಳೆ, ನಾಡಿದ್ದು ‘DCET’ ಮತ್ತು ‘PGCET’ ಪರೀಕ್ಷೆ : ವಿಜಯಪುರದಲ್ಲಿ ‘ನಿಷೇಧಾಜ್ಞೆ’ ಜಾರಿ
ವಾಹನ ಸವಾರರೇ ಗಮನಿಸಿ : ನಾಳೆಯಿಂದ ಡಿ.18 ರವರೆಗೆ ಬೆಂಗಳೂರಿನ ಈ ರಸ್ತೆ ಬಂದ್