ಟೋಕಿಯೋ : ಸೋಮವಾರ ಮಧ್ಯ ಜಪಾನ್’ನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಟೋಕಿಯೋ ಮತ್ತು ಇತರ ನಗರಗಳಲ್ಲಿ ಕಂಪನದ ಅನುಭವವಾಗಿದೆ. ಆದ್ರೆ, ಸುನಾಮಿ ಎಚ್ಚರಿಕೆಯನ್ನ ನೀಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು 350 ಕಿಲೋಮೀಟರ್ (217 ಮೈಲಿ) ಆಳದೊಂದಿಗೆ ಭೂಕಂಪದ ಕೇಂದ್ರಬಿಂದುವು ಮಧ್ಯ ಮೀ ಪ್ರಿಫೆಕ್ಚರ್ನಿಂದ ದೂರದಲ್ಲಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಅಂದ್ಹಾಗೆ, ಶನಿವಾರ ಸಂಜೆ, ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಬಲವಾದ ಕಂಪನದ ಅನುಭವವಾಗಿದೆ, ಉತ್ತರಾಖಂಡದ ಪಿಥೋರಗಡ್ನಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 101 ಕಿ.ಮೀ ದೂರದಲ್ಲಿರುವ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
An earthquake with a magnitude of 6.1 on the Richter Scale hit 84 km South Southeast of Toba, Japan today at 13:38:26 UTC: USGS pic.twitter.com/tYyNbBhGkI
— ANI (@ANI) November 14, 2022
Viral News : ಮೂವರು ವ್ಯಕ್ತಿಗಳಿಂದ ನಾಯಿಯನ್ನು ನೇಣು ಬಿಗಿದು ಸಾಯಿಸಿದ ‘ಹೃದಯ ವಿದ್ರಾವಕ video’ | WATCH
ವಿಶ್ವವಿಖ್ಯಾತ ‘KRS’ ನಲ್ಲಿ ಆತಂಕ ಮೂಡಿಸಿದ ಚಿರತೆ : ಬೃಂದಾವನಕ್ಕೆ ಪ್ರವಾಸಿಗರ ನಿಷೇಧ ಮುಂದುವರಿಕೆ