ಮಂಗಳೂರು : ದಕ್ಷಿಣ ಕನ್ನಡದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು, ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ಸ್ಫೋಟಗೊಂಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ನಾಗುರಿಯಲ್ಲಿ ಘಟನೆ ನಡೆದಿದ್ದು, ಅಟೋ ಚಾಲಕ ಮತ್ತು ಪ್ರಯಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕಂಕನಾಡಿ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಇಲಾಖೆಯ ತಜ್ಞರು ದೌಡಾಯಿದ್ದಾರೆ.
ಇಷ್ಟಕ್ಕೂ ಚಲಿಸುತ್ತಿದ್ದ ಆಟೋ ಏಕಾಏಕಿ ಸ್ಪೋಟವಾಗಲು ಕಾರಣವೇನು.? ಆಟೋದಲ್ಲಿ ಸ್ಪೋಟದ ವಸ್ತುವಿತ್ತಾ.? ಅಥ್ವಾ ಆಟೋದಲ್ಲಿ ಸ್ಪೋಟ ಸಂಭವಿಸಲು ಬೇರೆ ಕಾರಣವಿದ್ಯಾ.? ಅನ್ನೊ ಮಾಹಿತಿ ಇನ್ನು ಲಭ್ಯವಾಗಬೇಕಿದೆ.
tragedy love story: ಸತ್ತ ಬಳಿಕ ಅಂತ್ಯ ಸಂಸ್ಕಾರದಲ್ಲಿ ಪ್ರೇಯಸಿಯನ್ನೇ ಮದುವೆಯಾದ ಪ್ರೇಮಿ…! ಎಲ್ಲಿ ಗೊತ್ತಾ?
ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ರೂಪದರ್ಶಿಯ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವ ಮಹಿಳೆ ಸೇರಿದಂತೆ ನಾಲ್ವರ ಬಂಧನ