ಕೆಎನ್ಎನ್ಡಿಜಿಟಲ್ಡೆಸ್ಕ್: ತೈವಾನ್ ನ ತೈಪೆಯಲ್ಲಿ ಭೂಕಂಪನದ ಅನುಭವವಾಗಿದೆ. ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ಹುವಾಲಿಯನ್ ಕೌಂಟಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಘಟನೆ ನಡೆದ ಬಳಿಕ ಜನರು ತಮ್ಮ ಮನೆಗಳಿಂದ ಹೊರಬಂದರು ಎನ್ನಲಾಗಿದೆ ಆದಾಗ್ಯೂ, ಈ ವರದಿಯನ್ನು ಸಲ್ಲಿಸುವವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವು ವರದಿಯಾಗಿಲ್ಲ.
ಹವಾಮಾನ ಬ್ಯೂರೋ ಪ್ರಕಾರ, ಭೂಕಂಪದ ಆಳವು ಆರು ಕಿಲೋಮೀಟರ್ ಆಗಿತ್ತು ಅಂತ ತಿಳಿಸಿದ್ದು. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು 5.9 ಪರಿಮಾಣದ ರೀಡಿಂಗ್ಗಳು ಮತ್ತು 12 ಕಿಲೋಮೀಟರ್ ಆಳವನ್ನು ವರದಿ ಮಾಡಿದೆ.