ನವದೆಹಲಿ : 5ಜಿ ಸ್ಪೆಕ್ಟ್ರಂನ ಭಾರತದ ಮೊದಲ ಹರಾಜು ಇಂದು ಮುಕ್ತಾಯಗೊಂಡಿದ್ದು, 1,50,173 ಕೋಟಿ ರೂ.ಗಳ ಸ್ಪೆಕ್ಟ್ರಮ್ʼನ್ನ ಮಾರಾಟ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಏಳು ದಿನಗಳ ಕಾಲ ನಡೆದ ಹರಾಜು ಇಂದು ಮಧ್ಯಾಹ್ನ ಕೊನೆಗೊಂಡಿತು.
ಸೋಮವಾರ ಹರಾಜಿನ ಏಳನೇ ದಿನವಾಗಿದ್ದು, ಮಾರಾಟದಿಂದ ಬರುವ ಆದಾಯಕ್ಕೆ ತಾತ್ಕಾಲಿಕ ಸಂಖ್ಯೆ ₹1,50,173 ಕೋಟಿ ಮತ್ತು ಅಂತಿಮ ಸಂಖ್ಯೆಗಳನ್ನ ತಾಳೆ ಮಾಡಲಾಗುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ, ಪ್ರತಿಸ್ಪರ್ಧಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಮತ್ತು ಬಿಲಿಯನೇರ್ ಗೌತಮ್ ಅದಾನಿ ಅವ್ರ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ 5ಜಿ ತರಂಗಾಂತರಗಳ ಬಿಡ್ಡರ್ಗಳಲ್ಲಿ ಸೇರಿವೆ.
ಅಂದ್ಹಾಗೆ, ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, “ಈ ವರ್ಷದ ಅಕ್ಟೋಬರ್ ವೇಳೆಗೆ 5ಜಿ ಅನ್ನು 4 ಜಿ ಗಿಂತ ಸುಮಾರು 10 ಪಟ್ಟು ವೇಗವಾಗಿ ಡೇಟಾ ವೇಗವನ್ನ ಒದಗಿಸಬಹುದು ಎಂದು ಸರ್ಕಾರ ಹೇಳುತ್ತದೆ” ಎಂದು ಹೇಳಿದ್ದರು.