ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ 2 ದಿನದ ಬಳಿಕ ಮತ್ತೆ ಪುನಾರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಭಾಗಿಯಾಗಲಿದ್ದಾರೆ.
BIGG NEWS : ಭಾರತ್ ಜೋಡೋ ಪಾದಯಾತ್ರೆ ಬಳಿಕ ಸಿದ್ದರಾಮಯ್ಯರಿಂದ ರಾಜ್ಯಾದ್ಯಂತ `ರಥಯಾತ್ರೆ’ ಪ್ರಾರಂಭ
ಇಂದು ಬೆಳಗ್ಗೆ ಪಾಂಡವಪರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಮತ್ತೆ ಪೇ ಸಿಎಂ ಪ್ರದರ್ಶನ ಮಾಡಲಾಗಿದೆ. ನ್ಯಾಮನಹಳ್ಳಿಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಬಿಗ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅಕ್ಟೋಬರ್ 3 ರಂದು ಐಕ್ಯತಾ ಯಾತ್ರೆ ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕಿನ್ನಾಳು ಗ್ರಾಮವನ್ನು ತಲುಪಿತ್ತು. ಬಳಿಕ, ರಾಹುಲ್ ಗಾಂಧಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಕಬಿನಿ ಹಿನ್ನಿರು ಬಳಿ ಇರುವ ಆರೆಂಜ್ ಕೌಂಟಿ ರೆಸಾರ್ಟ್ ಗೆ ತೆರಳಿ, ತಾಯಿ ಸೋನಿಯಾ ಜೊತೆಗೆ ವಿಶ್ರಾಂತಿ ಪಡೆದಿದ್ದರು.