ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ʼನಲ್ಲಿ ಶನಿವಾರ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕದಿಂದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಇನ್ನು ಈ ಭೂಕಂಪದ ತೀವ್ರತೆಯನ್ನ ರಿಕ್ಟರ್ ಮಾಪಕದಲ್ಲಿ 3.2 ಎಂದು ಅಳೆಯಲಾಗಿದೆ.
ಅಂದ್ಹಾಗೆ, ಸರ್ದಾರ್ ಸರೋವರ್ ನರ್ಮದಾ ಅಣೆಕಟ್ಟಿನಿಂದ 30 ಕಿ.ಮೀ ದೂರದಲ್ಲಿರುವ ದಾಡಿಯಾಪಾಡ್ ಬಳಿ ಭೂಕಂಪದ ಕೇಂದ್ರಬಿಂದುವಾಗಿತ್ತು. ಪ್ರಸ್ತುತ, ಭೂಕಂಪದಿಂದ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.