ಚಾಮರಾಜನಗರ : ತಂಗಳು ಬಿರಿಯಾನಿ ಸೇವಿಸಿ 25 ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿ ಕುಣಿಗಳ್ಳಿಯಲ್ಲಿ ನಡೆದಿದೆ.
Good News : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ಪ್ರತಿ ವರ್ಷವೂ ಶಿಕ್ಷಕರ ನೇಮಕಾತಿ!
ಸಂತೋಷ್ ಎಂಬುವರು ಜುಲೈ18 ರಂದು ತಮ್ಮ ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿಕನ್ ಬಿರಿಯಾನಿ ಮಾಡಿಸಿದ್ದರು. ಬಿರಿಯಾನಿ ಮಾಡಿಸಿ ಸ್ನೇಹಿತರು, ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಜಮೀನಿಗೆ ಕಬ್ಬು ಕಟಾವಿಗೆ ಬಂದಿದ್ದ ಕಾರ್ಮಿಕರಿಗೆ ತಂಗಳು ಬಿರಿಯಾನಿ ನೀಡಿದ್ದರು.
ತಂಗಳು ಬಿರಿಯಾನಿ ಸೇವಿಸಿದ ಕಾರ್ಮಿಕರಿಗೆ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.