ನವದೆಹಲಿ : ದೆಹಲಿಯಲ್ಲಿ 5ನೇ ಮಂಗನಕಾಯಿಲೆ ಪ್ರಕರಣ ವರದಿಯಾಗಿದೆ ಎಂದು ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಶನಿವಾರ ಮಾಹಿತಿ ನೀಡಿದ್ದಾರೆ.
22 ವರ್ಷದ ಮಹಿಳೆಯ ಮಾದರಿಯನ್ನ ಶುಕ್ರವಾರ ಪಾಸಿಟಿವ್ ಎಂದು ಪರೀಕ್ಷಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ ಎಂದು ಡಾ.ಕುಮಾರ್ ಹೇಳಿದರು.
“ಒಬ್ಬ ರೋಗಿಯನ್ನು ಎಲ್ಎನ್ಜೆಪಿಯಲ್ಲಿ ದಾಖಲಿಸಲಾಗಿದೆ ಮತ್ತು ಅವಳ ಮಾದರಿ ಪಾಸಿಟಿವ್ ಬಂದಿದೆ. ಪ್ರಸ್ತುತ 4 ರೋಗಿಗಳನ್ನ ದಾಖಲಿಸಲಾಗಿದ್ದು, ಈ ಪೈಕಿ ಒಬ್ಬರು ಆಸೊತ್ರೆಯಿಂದ ಬಿಡುಗಡೆ ಮಾಡಲಾಗಿದೆ. ದೆಹಲಿಯಲ್ಲಿ ಒಟ್ಟು ಐದು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಮಹಿಳೆಗೆ ನಿನ್ನೆ ಪಾಸಿಟಿವ್ ಬಂದಿದ್ದು, ವೈದ್ಯರ ತಂಡವು ಆಕೆಗೆ ಚಿಕಿತ್ಸೆ ನೀಡುತ್ತಿದೆ” ಎಂದು ಡಾ.ಕುಮಾರ್ ಎಎನ್ಐಗೆ ತಿಳಿಸಿದರು.
ರೋಗಿಗೆ ಇತ್ತೀಚಿನ ಯಾವುದೇ ಪ್ರಯಾಣದ ಇತಿಹಾಸವಿಲ್ಲ, ಆದರೆ ಒಂದು ತಿಂಗಳ ಹಿಂದೆ ಪ್ರಯಾಣಿಸಿದ್ದಾರೆ ಎಂದು ಅವ್ರು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ಒಂದು ದಿನದ ನಂತ್ರ ಈ ವರ್ಷದ ಜುಲೈ 24ರಂದು ದೆಹಲಿಯಲ್ಲಿ ಮಂಕಿಪಾಕ್ಸ್ನ ಮೊದಲ ಪ್ರಕರಣವನ್ನ ದೃಢಪಡಿಸಲಾಗಿದೆ.
ದೇಶದ ಪ್ರವೇಶ ದ್ವಾರಗಳು ಸೇರಿದಂತೆ ಭಾರತದಲ್ಲಿ ವೈರಸ್ ಹರಡುವುದನ್ನ ತಡೆಯಲು ಕೇಂದ್ರ ಸರ್ಕಾರವು ಹಲವಾರು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಅನಾರೋಗ್ಯ ಪೀಡಿತರು, ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳು ಮತ್ತು ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಲು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಜುಲೈ 14ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.