ಬೀಜಿಂಗ್: ಚೀನಾದಲ್ಲಿ ಕಬ್ಬಿಣದ ಗಣಿಯಲ್ಲಿ ಪ್ರವಾಹ ಉಂಟಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ ಗಣಿಯು ಪ್ರವಾಹಕ್ಕೆ ಒಳಗಾಗಲು ಕಾರಣವನ್ನು ಕಂಡುಹಿಡಿಯಲಾಗುತ್ತಿದೆ ಎಂದು ತಂಗ್ಶಾನ್ ನಗರ ಸರ್ಕಾರ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಈ ಗಣಿಯು ಬೀಜಿಂಗ್ ನಿಂದ ಪೂರ್ವಕ್ಕೆ 160 ಕಿ.ಮೀ ದೂರದಲ್ಲಿರುವ ಹೆಬೈ ಪ್ರಾಂತ್ಯದಲ್ಲಿದೆ. ಹೆಬೆಯು ಹೆಚ್ಚಿನ ಪ್ರಮಾಣದ ಕಬ್ಬಿಣದ ಅದಿರು ಮತ್ತು ಉಕ್ಕನ್ನು ಹೊಂದಿರುತ್ತದೆ.