ಕೆಎನ್ಎನ್ಡಿಜಿಟಲ್ ಡೆಸ್ಕ್ : ಎಟಿಎಸ್ ಗುಜರಾತ್ ನೀಡಿದ ಸುಳಿವಿನ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್ (ICG) 300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು 40 ಕೆಜಿ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ 10 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ದೋಣಿಯನ್ನ ಬಂಧಿಸಿದೆ. ಅಲ್ ಸೊಹೇಲಿ ಎಂಬ ಮೀನುಗಾರಿಕಾ ದೋಣಿಯನ್ನ ಹೆಚ್ಚಿನ ತನಿಖೆಗಾಗಿ ಓಖಾಗೆ ಕರೆತರಲಾಯಿತು ಎಂದು ಐಸಿಜಿ ಹೇಳಿಕೆಯಲ್ಲಿ ತಿಳಿಸಿದೆ.
“ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಡಿಸೆಂಬರ್ 25-26ರ ರಾತ್ರಿ ಈ ಕಾರ್ಯಾಚರಣೆಯನ್ನ ನಡೆಸಲಾಯಿತು. ಐಸಿಜಿ ತನ್ನ ಹಡಗು ಐಸಿಜಿಎಸ್ ಅರಿಂಜಯ್’ನ್ನ ಪಾಕಿಸ್ತಾನದೊಂದಿಗಿನ ಕಾಲ್ಪನಿಕ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆ (IMBL) ಬಳಿ ನಿಯೋಜಿಸಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.
ಐಸಿಜಿ ತಂಡವು ಪಾಕಿಸ್ತಾನದ ಮೀನುಗಾರಿಕಾ ದೋಣಿ ಅಲ್ ಸೊಹೇಲಿಯನ್ನ ತಡೆದು 300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 40 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರೇ ಗಮನಿಸಿ ; ‘UIDAI’ ಮಹತ್ವದ ಸೂಚನೆ, ಈಗ ನೀವಿದನ್ನ ಮಾಡ್ಲೇಬೇಕು
Good News : ರೈತರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ 15 ಲಕ್ಷ ಲಭ್ಯ, ನೀವೂ ಅರ್ಜಿ ಸಲ್ಲಿಸಿ