ಕಲಬುರ್ಗಿ : ನವ ವಿಹಾಹಿತೆಯ ಶವವೊಂದು ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದೆ.
ಮೃತಳನ್ನು ಅವರಾದ (ಬಿ) ಗ್ರಾಮದ ನವವಿವಾಹಿತ ರಂಜಿತ (25) ಎಂದು ಹೇಳಲಾಗುತ್ತಿದ್ದು, ರಂಜಿತಾ ಕುಟುಂಬದವರಿಂದ ಇದೀಗ ಪತಿಯ ಮನೆಯವರಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ನೀರಾವರಿ ಇಲಾಖೆಯಲ್ಲಿ ರಂಜಿತಾ ಪತಿ ಉಮೇಶ್ ಸಹಾಯಕ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ತಿಂಗಳ ಹಿಂದೆ ರಂಜಿತ, ಉಮೇಶ್ ಅವರ ಮದುವೆಯಾಗಿತ್ತು. ಇದೀಗ ರಂಜಿತಾ ಪತಿ, ಅತ್ತೆ ಹಾಗೂ ಮಾವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಲ್ಬುರ್ಗಿ ಸ್ಟೇಷನ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.