ಗದಗ : ಗದಗ ನಲ್ಲಿ ನವ ವಿವಾಹಿತ ನಿಗೂಢವಾಗಿ ಸಾವನಪ್ಪಿದ್ದಾರೆ. ಮದುವೆಯಾದ ನಾಲ್ಕೇ ತಿಂಗಳಿಗೆ ಮಹಿಳೆ ಸಾವನಪ್ಪಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಬಳ್ಳಾರಿ ಮೂಲದ ಪೂಜಾ ಅಯ್ಯನಗೌಡ್ರು ಎನ್ನುವ ಮಹಿಳೆ ಸಾವನ್ನಪ್ಪಿರುವ ಮಹಿಳೆ ಎಂದು ತಿಳಿದುಬಂದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪೂಜಾಳ ಮೃತ ದೇಹ ಪತ್ತೆಯಾಗಿದೆ. ಮನೆ ಕೆಟಕಿಗೆ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಪೂಜಾ ಮೃತ ದೇಹ ಪತ್ತೆಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಅಮರೇಶ ಎಂಬಾತನ ಜೊತೆಗೆ ಪೂಜಾಳ ವಿವಾಹವಾಗಿತ್ತು. ಸಾವಿಗೂ ಮುನ್ನ ಪೂಜಾ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ನನ್ನ ಸಾವಿಗೆ ಅತ್ತೆ ಮತ್ತು ಭಾವ ವೀರಣ್ಣಗೌಡ ಕಾರಣ ಎಂದು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ ಡೆತ್ ನೋಟ್ ಪತ್ತೆಗುತ್ತಿದ್ದಂತೆ ಪೂಜಾ ಪೋಷಕರು ಆಕ್ರೋಶ ಅವರ ಹಾಕಿದ್ದು ಪೂಜಾ ಅತ್ತೆ ಮತ್ತು ಭಾವನ ವಿರುದ್ಧ ಕಿಡಿ ಕಾರುತ್ತಿದ್ದಾರೆ.