ಶಿವಮೊಗ್ಗ : ಶಿವಮೊಗ್ಗದಲ್ಲಿ ನವ ವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. 24 ವರ್ಷದ ಬಿ ಯು ಶಮಿತ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಕಳೆದ 8 ತಿಂಗಳ ಹಿಂದೆ ಸಮಿತ ಪ್ರೀತಿಸಿ ಮದುವೆಯಾಗಿದ್ದಳು ಎಂದು ಹೇಳಲಾಗುತ್ತಿದ್ದು, ತೀರ್ಥಹಳ್ಳಿಯ ದಾಸನಕೊಡುಗೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ ಡೆತ್ ನೋಟ್ ಬರೆದಿಟ್ಟು ಶಮಿತ ನೇಣಿಗೆ ಶರಣಾಗಿದ್ದಾಳೆ.
ಅನಾರೋಗ್ಯ ಅಂತ ಶಮಿತ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದ್ದು ಕಳೆದ ಎಂಟು ತಿಂಗಳ ಹಿಂದೆ ಪೋಷಕರ ಒಪ್ಪಿಗೆ ಪಡೆದು ಪ್ರೀತಿಸಿದ ಯುವಕನ ಜೊತೆಗೆ ಶಮಿತಾ ಮದುವೆಯಾಗಿದ್ದಳು ಅಲ್ಲದೆ ಶಿವಮೊಗ್ಗದಲ್ಲಿ ತೀರ್ಥಹಳ್ಳಿ ಮಧ್ಯದ ಒಂದು ಹಳ್ಳಿಯಲ್ಲಿ ವಾಸವಾಗಿದ್ದಳು.
ನಾನು ಆರೋಗ್ಯ ಸಮಸ್ಯೆಯಿಂದ ನೇಣಿಗೆ ಶರಣಾಗುತ್ತಿದ್ದು ಚಿಕ್ಕ ವಯಸ್ಸಿನಿಂದ ನನಗೆ ಥೈರೊಯ್ಡ್ ಸಮಸ್ಯೆ ಇತ್ತು ಎಂದು ಸಮೇತ ಉಲ್ಲೇಖಿಸಿದ್ದಾಳೆ. ಮಂಗಳವಾರ ಅತ್ತೆ ಮಾವ ಹಾಗೂ ಗಂಡನೊಂದಿಗೆ ರಾತ್ರಿ ಊಟ ಮಾಡಿ ಕೋಣೆಗೆ ತೆರಳ ಇದ್ದಾಗ ನೇಣು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರುದಿನ ಬೆಳಿಗ್ಗೆ ಈ ಘಟನೆ ಬಳಕೆಗೆ ಬಂದಿದೆ. ಘಟನೆ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ಇಬ್ಬರ ಮಕ್ಕಳ ಶವ ಪತ್ತೆ
ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶಿವ ಪತ್ತೆಯಾಗಿದ್ದು ಬಾಗೇಪಲ್ಲಿ ತಾಲೂಕಿನ ಮಿಟ್ಟೆಮರಿ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಕೆರೆಯಲ್ಲಿ ಶವ ಪತ್ತೆಯಾಗಿದೆ. ತಾಯಿರಾದ ಇಬ್ಬರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.ಚಿಂತಾಮಣಿ ತಾಲೂಕಿನ ಯಾಗವಕೋಟೆ ನಿವಾಸಿಯಾದ ಮೃತ ರಾಧಾ ಮಲ್ಲಿಕಾರ್ಜುನ ಜೊತೆ ಮದುವೆಯಾಗಿದ್ದಳು. ಎನ್ನಲಾಗುತ್ತಿದೆ.ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ