ಮಂಡ್ಯ : ಕಳೆದ 3 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಂಡಬೋಗನಹಳ್ಳಿಯಲ್ಲಿ ನಡೆದಿದೆ.
ಮೃತಳನ್ನು ದಾವಣಗೆರೆ ಮೂಲದ ರಾಧಿಕಾ (23) ಎಂದು ತಿಳಿಬಂದಿದೆ. ರಾಧಿಕಾ 3 ತಿಂಗಳ ಹಿಂದೆ ಮಂಡ್ಯದ ಅಜೇಯನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಅಜೇಯ್ ಮನೆಯವರು ಇಬ್ಬರನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ.
ಹಾಗಾಗಿ ಅಜೇಯ್ ಹಾಗು ರಾಧಿಕಾ ಇಬ್ಬರು ಅಜೇಯ್ ಚಿಕ್ಕಪ್ಪನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಇಂದು ಅಜೇಯ್ ಚಿಕ್ಕಪ್ಪನ ಮನೆಯಲ್ಲಿ ರಾಧಿಕಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.