ರಾಯಚೂರು : ವೈದ್ಯರ ನಿರ್ಲಕ್ಷಕ್ಕೆ ನವಜಾತ ಶಿಶು ಬಲಿಯಾಗಿದ್ದು ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ರಾಯಚೂರಿನ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಚಂದ್ರಶೇಖರ್ ಮತ್ತು ಪಾರ್ವತಮ್ಮ ಎಂಬ ದಂಪತಿಯ ಮಗು ಸಾವನಪ್ಪಿದೆ.
ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಚಂದ್ರಶೇಖರ್ ಮತ್ತು ಪಾರ್ವತಮ್ಮ ದಂಪತಿಯ ಮಗು ಇದೀಗ ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದೆ.ಕಳೆದ ಹಲವಾರು ದಿನಗಳಿಂದ ಎಷ್ಟೋ ಬಾಣಂತಿಯರು ಸಾವನಪ್ಪಿದ್ದರು ಇದೀಗ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಗಂಡು ಮಗು ಸಾವನ್ನಪ್ಪಿದ್ದನ್ನು ವೈದ್ಯರು ತಾಯಿಗೆ ತಿಳಿಸಿಲ್ಲ. ಮಗುವಿಗ್ ICU ನಲ್ಲಿ ಚಿಕಿತೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ ಹೊರತು ತಾಯಿ ಪಾರ್ವತಮ್ಮಗೆ ಮಗು ಸಾವನ್ನಪ್ಪಿದ ವಿಚಾರ ತಿಳಿಸಿಲ್ಲ.
ಪಾರ್ವತಮ್ಮ ಪತಿ ಚಂದ್ರಶೇಖರ ಮಾತನಾಡಿ, ನಾವು ಸಿಸೆರಿಯನ್ ಮಾಡಿ ಎಂದು ವೈದ್ಯರಿಗೆ ಹೇಳಿದ್ದೇವು. ಆದರೆ ಅವರು ನಿರ್ಲಕ್ಷ ತೋರಿ ನಾರ್ಮಲ್ ಹೆರಿಗೆ ಮಾಡಿದ್ದಾರೆ. ಈ ವೇಳೆ ಸಮಸ್ಯೆ ಆಗಿದೆ. ಮಗು ತಲೆ ಹೊರಬಂದ ಬಳಿಕ ಸಿಜೇರಿಯನ್ ಮಾಡಿದರು. ಸಿಸೇರಿಯನ್ ಮಾಡಿ ನಿರ್ಲಕ್ಷ ತೋರಿರುವ ಆರೋಪ ಇದೀಗ ಕೇಳಿ ಬರುತ್ತಿದೆ.