ಬಳ್ಳಾರಿ : ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಕೇವಲ 15 ದಿನಗಳಲ್ಲಿ ನಾಲ್ಕು ಜನ ಬಾಣಂತಿಯರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಇದೀಗ ಬಿಮ್ಸ್ ನಲ್ಲಿ ನವಜಾತ ಶಿಶು ಒಂದು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಇದೀಗ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಹೌದು ಸಿರಿಗೇರಿ ಗ್ರಾಮದ ಬಾಣಂತಿ ಗಂಗೋತ್ರಿ ಎನ್ನುವವರು, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಗಂಗೋತ್ರಿ ಮಗುವಿಗೆ ಜನ್ಮ ನೀಡಿದ್ದಳು. ನಾರ್ಮಲ್ ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಗಂಗೋತ್ರಿ ಏಕಾಏಕಿ ಬಿಮ್ಸ್ ವೈದ್ಯರು ಸಿಸೆರಿನ ಮಾಡಿದ್ದರು. ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಆಘಾತವಾಗಿದೆ.
ಬಾಣಂತಿಯರ ಸರಣಿ ಸಾವಿನ ಬಳಿಕ ಈಗ ಶಿಶುವಿನ ಮರಣವಾಗಿದೆ. ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಇದೀಗ ಮಗುವಿನ ಸಾವನಪ್ಪಿದೆ. ವೈದ್ಯರ ನಿರ್ಲಕ್ಷಕ್ಕೆ ಇದೀಗ ಮಗು ಸಾವಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.