ನವದೆಹಲಿ: ಹೋಟೆಲ್, ಕಾರ್ಯಕ್ರಮ ಆಯೋಜಕರು ಮುಂತಾದವರು ಗ್ರಾಹಕರ ಆಧಾರ್‌ಕಾರ್ಡ್ ಫೋಟೋ ಕಾಪಿ ತೆಗೆದುಕೊಂಡು ದಾಖಲಿಸಿಟ್ಟು ಕೊಳ್ಳುವ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಶೀಘ್ರದಲ್ಲೇ ಹೊಸ ನಿಯಮ ಜಾರಿಗೊಳಿಸಲಿದೆ.
ಯುಐಡಿಎಐ ಈ ಕುರಿತು ಮಾತನಾಡಿದ ಭುವನೇಶ್ ಕುಮಾರ್, ‘ಆಧಾರ್ ಕಾಯ್ದೆಯ ಪ್ರಕಾರ, ಹೋಟೆಲ್ ಮೊದಲಾದೆಡೆ ಗ್ರಾಹಕರ ಆಧಾರ್ ಕಾರ್ಡ್ ಪಡೆದು ಕೊಳ್ಳುವುದು ಕಾನೂನುಬಾಹಿರ. ಇದನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಜಾರಿ ಗೊಳಿಸುತ್ತಿದ್ದೇವೆ. ಇದರಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಆಧಾರ್ ಆ್ಯಪ್‌ನ ಮೂಲಕ ಗ್ರಾಹಕರ ಗುರುತು ಪರಿಶೀಲನೆ ಸಾಧ್ಯವಾಗಲಿದೆ. ಕಾಗದರಹಿತ ಪರಿಶೀಲನೆ ಮಾಡುವು ದರಿಂದ ಗ್ರಾಹಕರ ಖಾಸಗಿತನವೂ ಉಳಿ ಯುತ್ತದೆ, ಆಧಾರ್‌ಮಾಹಿತಿ ಸೋರಿಕೆಯಾ ಗುವ ಅಪಾಯವೂ ಇಲ್ಲ ಎಂದರು.
ಹೊಸ ನಿಯಮದ ಮುಖ್ಯ ಅಂಶಗಳು:
ಹೋಟೆಲ್, ಈವೆಂಟ್ ಆಯೋಜಕರು ಇತ್ಯಾದಿ ಸಂಸ್ಥೆಗಳು ಆಧಾರ್‌ಮೂಲಕ ಗುರುತು ಪರಿಶೀಲನೆ ಮಾಡಬೇಕಾದರೆ ಕಡ್ಡಾಯವಾಗಿ ಯುಐಡಿಎಐನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಯಾದ ಸಂಸ್ಥೆಗಳಿಗೆ ಹೊಸ ತಂತ್ರಜ್ಞಾನ (ಎಪಿಐ) ಸಿಗಲಿದೆ. ಗ್ರಾಹಕರ ಆಧಾರ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಹೊಸ ಆಧಾರ್‌ಆ್ಯಪ್ ಮೂಲಕ ಪರಿಶೀಲನೆ ಮಾಡಬಹುದು. ಕಾಗದ ಬಳಸುವ ಅಗತ್ಯವಿಲ್ಲ. ಈ ಹೊಸ ಆ್ಯಪ್ ಆಫ್‌ಲೈನ್‌ನಲ್ಲೂ ಕೆಲಸ ಮಾಡಲಿದೆ. ಸರ್ವ‌್ರಡೌನ್ ಆದರೂ ಪರಿಶೀಲನೆಗೆ ತೊಂದರೆ ಆಗುವುದಿಲ್ಲ. ವಿಮಾನ ನಿಲ್ದಾಣಗಳಂತಹ ಇತರ ಸ್ಥಳಗಳಲ್ಲೂ ಈ ವ್ಯವಸ್ಥೆ ಉಪಯುಕ್ತವಾಗಲಿದೆ.








