ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಹೇಳಲಾದ ಅಮನ್ ಸಿಂಗ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ಜಾರ್ಖಂಡ್ನ ಧನ್ಬಾದ್ನಿಂದ ಬಂಧಿಸಿದೆ. ನೀಟ್-ಯುಜಿ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ನಡೆಸುತ್ತಿರುವ ಏಳನೇ ಬಂಧನ ಇದಾಗಿದೆ.
ಭಾನುವಾರ ಗುಜರಾತ್ನ ಗೋಧ್ರಾ ಜಿಲ್ಲೆಯ ಖಾಸಗಿ ಶಾಲೆಯ ಮಾಲೀಕನನ್ನು ಸಿಬಿಐ ಬಂಧಿಸಿತ್ತು. ಪಂಚಮಹಲ್ ಜಿಲ್ಲೆಯ ಗೋಧ್ರಾ ಬಳಿಯ ಜಯ್ ಜಲರಾಮ್ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಅವರನ್ನು ಪರೀಕ್ಷೆಯ ಅಂಕಗಳನ್ನು ಹೆಚ್ಚಿಸುವುದಾಗಿ ಭರವಸೆ ನೀಡಿ ಅಭ್ಯರ್ಥಿಗಳಿಂದ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿಸಲಾಗಿದೆ.
Champions Trophy 2025 : ಮಾ.1ರಂದು ಲಾಹೋರ್’ನಲ್ಲಿ ‘ಭಾರತ-ಪಾಕ್ ಪಂದ್ಯ’ ನಿಗದಿ ; ‘BCCI’ ಹೇಳಿದ್ದೇನು.?
BIG BREAKING: ಡೆಂಗ್ಯೂ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ | Dengue Test Price