ನವದೆಹಲಿ: ಕಾರ್ಡೆಲಿಯಾ ಡ್ರಗ್ಸ್ ದಾಳಿ ಪ್ರಕರಣದಲ್ಲಿ ಆರ್ಯನ್ ಖಾನ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಯ ವಿಶೇಷ ತನಿಖಾ ತಂಡದ (SIT) ನೇತೃತ್ವ ವಹಿಸಿದ್ದ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರು ವೈಯಕ್ತಿಕ ಕಾರಣಗಳಿಗಾಗಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಒಡಿಶಾ ಕೇಡರ್ನ 1996ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್, ಮುಂಬೈನ ಎನ್ಸಿಬಿಯ ಉಪ ಮಹಾನಿರ್ದೇಶಕ (DDG) ಆಗಿದ್ದರು. 2025 ರ ಜನವರಿಯಲ್ಲಿ ಸೇವೆಯಿಂದ ನಿವೃತ್ತರಾಗುವ ಸುಮಾರು ಒಂದು ವರ್ಷದ ಮೊದಲು ಸಿಂಗ್ ಈ ವರ್ಷದ ಫೆಬ್ರವರಿ 29 ರಂದು ವಿಆರ್ಎಸ್ಗೆ ಅರ್ಜಿ ಸಲ್ಲಿಸಿದರು. ಅವರ ಮನವಿಯನ್ನು ಏಪ್ರಿಲ್ ೧೬ ರಂದು ರಾಜ್ಯ ಸರ್ಕಾರ ಅನುಮೋದಿಸಿತು.
ತುಷ್ಟೀಕರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕ ಹಿಂದೂಗಳನ್ನು ಬಲಿ ಹಾಕುತ್ತೀರಿ : ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ
BREAKING : ಲೋಕಸಭಾ ಚುನಾವಣೆಗೂ ಮುನ್ನ ‘AAP’ ಮತ್ತೊಂದು ಶಾಕ್ : ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್