ಚಿಕ್ಕಮಗಳೂರು : ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರು ಇಂದು ಚಿಕ್ಕಮಂಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು, ಈಗಾಗಲೇ ಚಿಕ್ಕಮಂಗಳೂರು ಡಿಸಿ ಕಚೇರಿ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ನಿನ್ನೆ ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲಪ್ರದವಾಗಿದ್ದು ಇಂದು ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯ ವಾಹಿನಿಗೆ ಬರಲಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದಾರೆ.
ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ನಕ್ಸಲರು ತೆರಳಲಿದ್ದಾರೆ. ಬಳಿಕ 11 ಗಂಟೆಗೆ ಜಿಲ್ಲಾಡಳಿತದ ಮುಂದೆ 6 ಮಂದಿ ನಕಲರು ಶರಣಾಗತಿ ಆಗಲಿದ್ದಾರೆ. 24 ವರ್ಷದ ಬಳಿಕ ಶಸ್ತ್ರ ಹಾಗೂ ಕಾಡನ್ನು ತ್ಯಜಿಸಿದ ನಕ್ಸಲರು ಇಂದು ಶರಣಾಗಲಿದ್ದಾರೆ. ನಕ್ಸಲ್ ನಾಯಕಿ ಮುಂಡಗರು ಲತಾ ವಿರುದ್ಧ 85 ಕೇಸ್ಗಳಿವೆ ಸುಂದರಿ ವಿರುದ್ಧ 71 ಜಯನ ವಿರುದ್ಧ 50 ವನಜಾಕ್ಷಿ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ತಮಿಳುನಾಡಿನ ನಕ್ಸಲ್ ಕೆ ವಸಂತ ವಿರುದ್ಧ 8 ಪ್ರಕರಣಗಳಿವೆ ಕೇರಳ ಮೂಲದ ಜೀಶಾ ವಿರುದ್ಧ 27 ಪ್ರಕರಣಗಳು ಇವೆ.
ಈಗಾಗಲೇ ಚಿಕ್ಕಮಂಗಳೂರು ಜಿಲ್ಲಾಡಳಿತ ಸಂಪೂರ್ಣ ವಾದಂತಹ ಪ್ರಕ್ರಿಯೆ ಮುಗಿಸಿದ್ದು, ರಾಯಚೂರಿನ ಜಯಣ್ಣ ಅಲಿಯಾಸ್ ಮಾರಪ್ಪ ಅರೋಲಿ ಕೇರಳದ ಜೀಶಾ, ತಮಿಳುನಾಡಿನ ವಸಂತ ಕೆ ಅಲಿಯಾಸ್ ರಮೇಶ್ ಶಾಂತಿಗಾಗಿ ನಾಗರಿಕ ವೇದಿಕೆ ಸಮ್ಮುಖ ಶರಣಾಗುತ್ತಿದ್ದಾರೆ. ಶ್ರೀಪಾಲ್, ನೂರ್ ಶ್ರೀಧರ್ ನೇತೃತ್ವ ನಾಗರಿಕ ವೇದಿಕೆಯ ತಂಡದ ಸಮ್ಮುಖದಲ್ಲಿ ಮಾಜಿ ನಕ್ಸಲರು ಹಾಗೂ ನಕ್ಸಲರ ಕುಟುಂಬದವರ ಸಮ್ಮುಖದಲ್ಲಿ 6 ಜನ ನಕ್ಸಲರು ಶರಣಾಗುತ್ತಿದ್ದಾರೆ.
ಇಂದು ಆರು ಜನ ನಕ್ಸಲರು ಶರಣಾಗತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಪ್ರವಾಸಿ ಮಂದಿರ ಡಿಸಿ ಕಚೇರಿಯ ಬಳಿ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದ್ದು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಕೂಡ ನಡೆಸಲಾಗುತ್ತಿದೆ. ಡಿಸಿ ಕಚೇರಿಯ ಬಳಿ ಮುಂಜಾಗ್ರತ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದೆ.