ಚಿಕ್ಕಮಗಳೂರು : ರಾಜ್ಯದಲ್ಲಿ ಇದೀಗ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದ್ದು, ಮಲೆನಾಡಿನ ಹಲವು ಗ್ರಾಮಗಳಿಗೆ ನಕ್ಷತ್ರರು ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸ್ ವರಿಷ್ಠ ಅಧಿಕಾರಿ ವಿಕ್ರಂ ಆಂಟಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ಹೌದು ಮಲೆನಾಡಿನ ಹಲವು ನಿವಾಸಿಗಳ ಮನೆಗೆ ನಕ್ಸಲರು ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಚಿಕ್ಕಮಂಗಳೂರು ಪೊಲೀಸ್ ವರಿಷ್ಠ ಅಧಿಕಾರಿ ವಿಕ್ರಂ ಅಮ್ಟೆ ಮತ್ತು ನಕ್ಸಲ್ ಅನಿಗ್ರಹ ಪಡೆ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಜಯಪುರ ಠಾಣಾ ವ್ಯಾಪ್ತಿಯ ಮನೆಗಳಿಗೆ ನಕ್ಸಲರು ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಕೊಪ್ಪ ತಾಲೂಕಿನ ಯಡಗುಂದಿ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಒಂಟಿ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಯಡಗುಂದಿ ಗ್ರಾಮದಲ್ಲಿ ಕಾರ್ಯಾಚರಣೆ ಇದೀಗ ತೀವ್ರಗೊಂಡಿದೆ. ಗ್ರಾಮಸ್ಥರಿಂದ ANF ಹಾಗೂ ಪೊಲೀಸರು ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅರಣ್ಯ ಒತ್ತುವರಿ ಕಸ್ತೂರಿರಂಗನ್ ವರದಿ ಸಂಬಂಧ ಯಡಗುಂದಿ ಗ್ರಾಮಸ್ಥರ ಜೊತೆ ನಕ್ಸಲರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.ಗ್ರಾಮದ ಪ್ರತಿ ಮನೆಯಲ್ಲೂ ಕೂಡ ಪೊಲೀಸರು ಶೋಧ ನಡೆಸಿದ್ದಾರೆ ಕೆರೆಕಟ್ಟೆ ಕುದುರೆಮುಖ ತನಿ ಕೊಡು ಚೆಕ್ ಪೋಸ್ಟ್ ಗಳಲ್ಲಿ ಶೋಧ ನಡೆಯುತ್ತಿದೆ.