ಉತ್ತರಕನ್ನಡ : ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಇದೀಗ ಭಾರತೀಯ ಭದ್ರತಾ ಪಡೆ ಸೈನಿಕರು ಪ್ರತಿಕಾರ ತೀರಿಸಿಕೊಳ್ಳಲು ಉಗ್ರರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಇದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯಲ್ಲಿ ಯುದ್ಧ ಹಡಗುಗಳು ಸಿದ್ಧವಾಗಿದ್ದು, ನೌಕಾದಳದ ಸಿಬ್ಬಂದಿಗಳ ರಜೆಯನ್ನು ಸಹ ಇದೀಗ ಮೋಟಕುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಹೌದು ಕಾರವಾರ ಕದಂಬ ನೌಕಾನೆಲೆಯಲ್ಲಿ ನೌಕೆಗಳು ಯುದ್ಧಕ್ಕೆ ಸಿದ್ಧವಾಗಿವೆ. ಭಾರತದ ಗಡಿಗೆ ನಿಯೋಜಿಸಲು ಹಡಗುಗಳು ಮತ್ತು ಸಬ್ ಮೆರೀನುಗಳು ಸಿದ್ಧವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನೌಕ ನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್, ಐಎನ್ಎಸ್ ವಿಶಾಖಪಟ್ಟಣಂ, ಸಬ್ ಮೇರಿನಗಳಾದ ಕಾಂಡೇರಿ ಕರಂಜೆ ಸಿದ್ಧವಾಗಿದೆ.
ಕೇವಲ ಕಮಾಂಡರ್ ಸೂಚನೆಗಾಗಿ ಯುದ್ಧ ನೌಕೆಗಳು ಇದೀಗ ಕಾಯುತ್ತಿವೆ. ಸೂಚನೆ ಬಂದ್ರೆ ಸಾಕು ಹಡಗುಗಳು ಗಡಿಯತ್ತ ತೆರಳಲಿವೆ. ಹಡಗನ್ನು ಸಿಬ್ಬಂದಿಗಳು ಯುದ್ಧಕ್ಕೆ ಸಿದ್ಧಪಡಿಸುತ್ತಿವೆ. ಮೇ ಮೊದಲ ವಾರ ಕೊಚ್ಚಿಯಿಂದ ಯುದ್ಧ ಹಡಗುಗಳು ಗಡಿಯತ್ತ ತೆರಳಲಿವೆ. ಕದಂಬ ನೌಕ ನೆಲೆಯಲ್ಲಿ ಐ ಎನ್ ಎಸ್ ಸುಭದ್ರ ಕಾರ್ಯಾಚರಣೆಗೆ ಅಣಿಯಾಗಿದೆ.
ಅದೇ ರೀತಿ ಐಎನ್ಎಸ್ ಜ್ಯೋತಿ, ಐಎನ್ಎಸ್ ವಿಶಾಖಪಟ್ಟಣಂ ಸಬ್ ಮೇರಿನಗಳಾದ ಕಾಂಡೇರಿ ಕರಂಜೆ ಸಹ ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನೌಕಾದಳದ ಸಿಬ್ಬಂದಿಗೆ ರಜೆ ಇದೀಗ ಮೊಟಕು ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.