ಮೈಸೂರು : ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರು ಚಾಲನೆ ನೀಡಲಿದ್ದು, ಅದಕ್ಕೂ ಮುನ್ನ ಇಂದು ನಾಡದೇವತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಇಂದು ಆರಂಭವಾಗಲಿದೆ. ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಸ್ತಾಕ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ದಸರಾ ಉದ್ಘಾಟನೆ ಬಾನು ಮುಷ್ತಾಕ್ ಬಂದಿದ್ದರು. ತಾಯಿ ಚಾಮುಂಡೇಶ್ವರಿ ಪೂಜೆ ವೇಳೆ ಅವರು ಭಾವುಕರಾಗಿದ್ದು, ಕಣ್ಣಂಚಲಿ ಬಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ.
ಬಳಿಕ ಭಾಷಣದಲ್ಲಿ ಮಾತನಾಡಿದ ಅವರು, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು.ಈಗ ಸರ್ಕಾರ ನನ್ನನ್ನು ದಸರಾ ಉದ್ಘಾಟನೆಗೆ ಅಹ್ವಾನಿಸಿದದ ಬಳಿಕ ಬೇಕಾದಷ್ಟು ಏರುಪೇರು ಹಾಗೂ ಸನ್ನಿವೇಶಗಳು ನಡೆದರೂ ಕೂಡ, ತಾಯಿ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ನಾನು ಈಗ ತಾನೆ ಹಾಗೆ ಸನ್ನಿಧಿಯಿಂದ ನಿಮ್ಮೆಲ್ಲರಿಗೆ ಬಂದು ನಿಂತಿದ್ದೇನೆ. ದಸರಾ ಅಂದರೆ ಇದು ಕೇವಲ ಹಬ್ಬ ಮಾತ್ರ ಅಲ್ಲ ಇದು ನಾಡಿನ ಒಂದು ನಾಡಿಮಿಡಿತ ಸಂಸ್ಕೃತಿಯ ಉತ್ಸವ ಎಲ್ಲರನ್ನೂ ಒಳಗೊಳ್ಳುವಂತಹ ಗಳಿಗೆ ಸಮನ್ವಯದ ಮೇಳವಾಗಿದೆ. ಹೆಸರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನದ ವರೆಗೆ ಈ ಹಬ್ಬವು ನಮಗೆ ನೆನಪಿಸುತ್ತದೆ.
ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ದಸರಾ ನಮ್ಮ ಸಮಗ್ರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ನನಗೆ ಗೊತ್ತಿರುವ ಹಾಗೆ ಮೈಸೂರಿನ ಉರ್ದು ಭಾಷೆಕರು ನವರಾತ್ರಿಯ ಎಲ್ಲಾ 10 ದಿನಗಳಿಗೂ ಉರ್ದುವಿನಲ್ಲಿ ಅವರದೇ ಆದಂತಹ ಗುರುತನ್ನ ಕೊಟ್ಟಿರುತ್ತಾರೆ.ನನಗೆ ನೆನಪಿನಲ್ಲಿ ಇರುವ ಹೇಳುವ ಹಾಗೆ ವಿಜಯದಶಮಿಗೆ ಇಲ್ಲಿನ ಉರ್ದು ಭಾಷಿಕರು ಸಿಲಿಂಗನ್ ಅಂತ ಕರೆಯುತ್ತಾರೆ ಅದು ಅವರ ಸಾಹಿತ್ಯ ಸಂಸ್ಕೃತಿ ಮತ್ತು ಬದುಕಿನಲ್ಲಿ ಭಾಗವಾಗಿದೆ ಯಾರು ಭಿನ್ನರಲ್ಲ, ಯಾರು ಪರಕಿಯರಲ್ಲ ಇರಲ್ಲ ಎಲ್ಲರೂ ಕೂಡ ಒಳಗೊಂಡಂತಹ ಆಚರಿಸುವಂತಹ ಒಂದು ಸಾಂಸ್ಕೃತಿಕ ಉತ್ಸವವಾಗಿದೆ.
ನನ್ನ ಆತ್ಮ ಸಂಬಂಧಿ ಒಬ್ಬರು ನನಗೆ ಅವರು ಮಾವ ಆಗಬೇಕು. ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಒಬ್ಬ ಸೈನಿಕರಾಗಿದ್ದರು. ಅವರು ನಮ್ಮ ಎಲ್ಲಾ ಮನೆಗಳಲ್ಲಿ ಸಿಪಾಯಿ ಮೊಮ್ಮಗಳು ಅಂತನೇ ಕರೆಯುತ್ತಿದ್ದರು. ನನಗೆ ಈಗ ಹೆಮ್ಮೆ ಅನಿಸುವಂತದ್ದು ಏನೆಂದರೆ , ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಮರನ್ನು ನಂಬಿ ಮುಸ್ಲಿಮರ ಬಗ್ಗೆ ಅನುಮಾನ ಪಡದೆ ತಮ್ಮ ಅಂಗ ರಕ್ಷಕ ಪಡೆಯ ಸದಸ್ಯರನ್ನು ಮಾಡಿಕೊಂಡರು ಅವರ ಬಗ್ಗೆ ಭರವಸೆ ಇಟ್ಟಿದ್ದು, ನನಗೆ ನಿಜವಾಗಿಯೂ ನನಗೆ ಹೆಮ್ಮೆ ತರುತ್ತದೆ ಎಂದು ತಿಳಿಸಿದರು.
#WATCH | Mysuru: Karnataka Chief Minister Siddaramaiah, Booker prize-winning author Banu Mushtaq, and other dignitaries inaugurated Dasara 2025 by performing a floral offering to Goddess Chamundeshwari on the silver chariot. pic.twitter.com/lDunOoKZuA
— ANI (@ANI) September 22, 2025
#WATCH | Mysuru: Karnataka Chief Minister Siddaramaiah, Booker prize-winning author Banu Mushtaq, Mysuru district-in-charge minister Mahadevappa, ministers Shivraj Tangadgi, HK Patil and K Venkatesh and other dignitaries inaugurate Mysuru Dasara festivities. pic.twitter.com/EXOdIEDUSI
— ANI (@ANI) September 22, 2025