ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಲಕ್ಷ್ಮಿಗುಡದ ಶ್ರೀ ಶ್ರೀ ಯಡೆ ಮಾತಾ ಮಂದಿರದ ಬಳಿ ಹಠಾತ್ ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ.
ದೇವಾಲಯದ ಅರ್ಚಕ ಸುಗುಣರಾಮ್ ಅವರು ದೇವಾಲಯದ ಆವರಣದ ಬಳಿ ಕಸವನ್ನು ತೆರವುಗೊಳಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನ ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರಂಭಿಕ ವರದಿಗಳ ಪ್ರಕಾರ ಅವರ ಸ್ಥಿತಿ ಗಂಭೀರವಾಗಿದೆ.
ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್, ಪ್ರಕರಣ ದಾಖಲಿಸಲಾಗಿದೆ ಮತ್ತು ಸ್ಫೋಟದ ಕಾರಣವನ್ನ ಕಂಡುಹಿಡಿಯಲು ಕ್ಲೂಸ್ ತಂಡವು ಪುರಾವೆಗಳನ್ನು ಸಂಗ್ರಹಿಸುತ್ತಿದೆ ಎಂದು ದೃಢಪಡಿಸಿದರು.
ಕೋಳಿ ಮೊದಲಾ.? ಮೊಟ್ಟೆ ಮೊದಲಾ.? ಕೊನೆಗೂ ರಹಸ್ಯ ಬೇಧಿಸಿದ ‘ವಿಜ್ಞಾನಿ’ಗಳು