ರಾಯಚೂರು : ಕಳೆದ ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶ ತೆಲಂಗಾಣದಲ್ಲಿ ಹಕ್ಕಿಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪುತ್ತಿದ್ದು ಇದೀಗ ಈ ಒಂದು ಹಕ್ಕಿಜ್ವರ ರಾಜ್ಯಕ್ಕೂ ಕಾಲಿಟ್ಟಿದ್ದು, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ವಿವಿಧ ಪ್ರಭೇದದ ಪಕ್ಷಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಯೋಗಾಲಯ ವರದಿಯಲ್ಲಿ ನೆಗೆಟಿವ್ ಅಂಶ ಎಂದು ವರದಿ ಬಂದಿದೆ.
ಹೌದು ಮಾನ್ವಿಯಲ್ಲಿ ಹಕ್ಕಿಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಯೋಗಾಲಯದ ವರದಿಯಲ್ಲಿ ಹಕ್ಕಿಜ್ವರ ಅಂಶ ನೆಗೆಟಿವ್ ಎಂದು ತಿಳಿದು ಬಂದಿದೆ. ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವಡೆ ಹಕ್ಕಿಗಳ ನಿಗೂಢ ಸಾವಾಗಿದೆ. ಬೆಳ್ಳಕ್ಕಿ ಸೇರಿದಂತೆ ವಿವಿಧ ಪ್ರಭೇದ 30ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿದ್ದವು.
ಪಕ್ಷಿಯ ಕಳೆಬರ ಪ್ರಯೋಗಾಲಕ್ಕೆ ಕಳುಹಿಸಿದ ಪಶು ವೈದ್ಯಾಧಿಕಾರಿಗಳು ಪ್ರಯೋಗಾಲದ ವರದಿಯಲ್ಲಿ ನೆಗೆಟಿವ್ ಅಂಶ ಎಂಬುವುದು ಉಲ್ಲೇಖವಾಗಿದೆ ನ್ಯೂಕ್ಯಾಟಲ್ ಡಿಸೀಸ್ ವೈರಸ್, ಎವಿಎನ್ ಇನ್ಫಾವೆಂಜಾ ಟೆಸ್ಟ್ ನಡೆಸಲಾಗಿದ್ದು, RTPCR ಹಾಗು LEF ನಡೆದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಬೆಂಗಳೂರಿನ ಪ್ರಯೋಗಾಲಯದಲ್ಲಿ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಿಸಿಲು ನಾಡು, ರಾಯಚೂರು ಜನರ ಆತಂಕ ದೂರ ಮಾಡಿದ ವರದಿ.