ತುಮಕೂರು : ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ನಿಗೂಢವಾಗಿ ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಈ ಒಂದು ಘಟನೆ ಸಂಭವಿಸಿದೆ. 2 ದಿನಗಳ ಅಂತರದಲ್ಲಿ ಒಟ್ಟು 11 ಮಂಗಗಳ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಂಗಗಳಿಗೆ ವಿಷ ಪ್ರಾಷಣ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಮೊದಲ ದಿನ 7 ಮಂಗಗಳು ಹಾಗೂ ಎರಡನೇ ಗಿಡ 4 ಮಂಗಗಳ ಕಳೆಬರ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಯನ್ನು ಆದರಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಅನುಮಾನಗೊಂಡು ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ. ಮಂಗಗಳು ಯಾವುದೇ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ದಡಪಟ್ಟಿದ್ದು ಮಂಗಗಳ ಸಾವಿನ ಕಾರಣ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಮುಂದಾಗಿದೆ. ಊರ್ಡಿಗಿರಿಯ ಪಶು ಆಸ್ಪತ್ರೆಯಲ್ಲಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆಯಿತು ಪರೀಕ್ಷಾ ವೇಳೆ ಮೃತ ಮಂಗಗಳ ದೇಹ ಹಾಗೂ ಕರುಳಿನಲ್ಲಿ ಅನ್ನಪತ್ತೆಯಾಗಿದೆ.








